Advertisement

7 ತರಗತಿಗಳಿಗೆ ಇಬ್ಬರೇ ಶಿಕ್ಷಕರು

01:11 PM Nov 29, 2019 | Suhan S |

ಕುಷ್ಟಗಿ: ತಾಲೂಕಿನ ಮೆಣಸಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದು ಪಾಲಕರನ್ನು ಚಿಂತೆಗೀಡು ಮಾಡಿದೆ.

Advertisement

ಮೆಣಸಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆ ಹೊಸದೇನಲ್ಲ. ಈ ಸಮಸ್ಯೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಯಾವುದೇ ಬದಲಾವಣೆ ಕಾಣದಿರುವ ಹಿನ್ನೆಲೆ ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಬಹುತೇಕ ಪಾಲಕರು, ವಿಧಿ ಇಲ್ಲದೇ ಈ ಶಾಲೆಗೆ ಕಳುಹಿಸುತ್ತಿದ್ದು, ಮಕ್ಕಳ ಗುಣಮಟ್ಟದ ಶಿಕ್ಷಣ ದೊರಕದಿರುವುದು ಪಾಲಕರಲ್ಲಿ ಕಳವಳ ಹೆಚ್ಚಿಸಿದೆ. ಈ ಗ್ರಾಮದ ಪಕ್ಕದ ಮೆಣಸಗೇರಾ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ವರುಶಿಕ್ಷಕರಿದ್ದಾರೆ. ಆದರೆ ಮೆಣಸಗೇರಾ ಹಿರಿಯ ಪ್ರಾಥಮಿಕ ಶಾಲೆಗೆ ಸದ್ಯ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರೇ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ.

ನ. 5ರಿಂದ ಪ್ರಭಾರಿ ಜವಾಬ್ದಾರಿ ನಿರ್ವಹಿಸುವ ಮುಖ್ಯ ಶಿಕ್ಷಕ ಬಸವರಾಜ ಕೊಡಗಲಿ ವೈದ್ಯಕೀಯ ರಜೆ ಹಾಕಿದ್ದು, ಲಕ್ಷ್ಮಣ ಮುತ್ತಗಿ ಒಬ್ಬರೇ ಕಾಯಂ ಶಿಕ್ಷಕರಾಗಿದ್ದಾರೆ. ಸದ್ಯ ಇರುವ ಈ ಶಿಕ್ಷಕರು ರಜೆ, ಕಚೇರಿ ಕೆಲಸಕ್ಕೆ ತೆರಳಿದರೆ ಶಾಲೆಯ ಜವಾಬ್ದಾರಿ ಅತಿಥಿ ಶಿಕ್ಷಕರ ಹೆಗಲಿಗೆ ಬೀಳುತ್ತದೆ. ಕಳೆದ ಐದು ತಿಂಗಳಿನಿಂದ ಈ ಅತಿಥಿ ಶಿಕ್ಷಕರಿಗೆ ಗೌರವ ಧನ ಸಹ ನೀಡಿಲ್ಲ. ಶಾಲೆಯಲ್ಲಿ 1ರಿಂದ 7ನೇ ತರಗತಿಗೆ ಒಟ್ಟು 126 ವಿದ್ಯಾರ್ಥಿಗಳಿದ್ದು, ಪ್ರತಿದಿನ ಸರಾಸರಿ ಹಾಜರಾತಿ 110ರಿಂದ 115 ಇರುತ್ತದೆ. ವಿದ್ಯಾರ್ಥಿಗಳಿಗೆ ಕೊಠಡಿ ಸಮಸ್ಯೆ ಇಲ್ಲ. ಶೌಚಾಲಯದ ತೊಂದರೆ ಇದೆ.

ಈಗಿರುವ 5 ಕೊಠಡಿಗಳಲ್ಲದೇ ಮತ್ತೆರಡು ಕೊಠಡಿ ನಿರ್ಮಾಣವಾಗುತ್ತಿವೆ. ಮುಖ್ಯ ಶಿಕ್ಷಕ ನಿಯಮಿತವಾಗಿ ಬರುತ್ತಿಲ್ಲ. ಶಾಲೆಯಲ್ಲಿ ತಾಸು ಇರುವುದೇ ಹೆಚ್ಚು. ಪ್ರಭಾರಿ ವಹಿಸಿಕೊಂಡಿರುವ ಈ ಮುಖ್ಯ ಶಿಕ್ಷಕನ ಬದಲಿಗೆ ಇನ್ನೊಬ್ಬರನ್ನು ಹಾಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿಶಿಕ್ಷಕರನ್ನು ನಿಯುಕ್ತಿಗೊಳಿಸುವಂತೆ ಗ್ರಾಮದ ಮಹಾಂತೇಶ ಬೂದಿಹಾಳ, ಲಕ್ಷ್ಮಣ ಅಲ್ಲೂರು, ಶರಣಪ್ಪ ತೋಟದ್‌ ಒತ್ತಾಯಿಸಿದ್ದಾರೆ.

ಈ ಶಾಲೆಯ ಶಿಕ್ಷಕರ ಕಾರ್ಯ ನಿರ್ವಹಣೆಯ ಬಗ್ಗೆ ಬೇಸರವಿದೆ. ಹೀಗೆ ಆದರೆ ನಮ್ಮೂರ ಶಾಲೆ ಸುಧಾರಿಸದು ಎಂದು ತಿಳಿದು ನಮ್ಮ ಮಗಳನ್ನು ಹುನಗುಂದ ಶಾಲೆಗೆ ಸೇರಿಸಿದ್ದೇನೆ  –ನಾಗನಗೌಡ ಪಾಲಕ

Advertisement

ನಮ್ಮ ಹುಡಗಿ ನಾಲ್ಕನೇ ತರಗತಿ ಓದುತ್ತಿದ್ದು ನಾಲ್ಕರ ಮಗ್ಗಿ ಗೊತ್ತಿಲ್ಲ. ಈಗ ಕಲಿಯದೇ ಮುಂದೇನು ಕಲಿಯುತ್ತಾರೆನ್ನುವ ಚಿಂತೆಯಾಗಿದೆ. ಶಾಲೆಯಲ್ಲಿ ಪಾಠ ಮಾಡಿಸದೇ ಬಿಸಿಯೂಟ ಮಾಡಿಸಿ ಕಳಿಸುತ್ತಾರೆ.  ಶಿವನಗೌಡ, ಪಾಲಕ

 

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next