Advertisement

ಕೋವಿಡ್ ನಕಲಿ ಸರ್ಟಿಫಿಕೇಟ್ : ಎರಡು ಪರೀಕ್ಷಾ ಕೇಂದ್ರಗಳಿಗೆ ಬೀಗ

07:15 PM Apr 01, 2021 | Team Udayavani |

ಗಾಂಧಿನಗರ: ಕೋವಿಡ್ ನಕಲಿ ಸರ್ಟಿಫಿಕೇಟ್ ನೀಡುತ್ತಿದ್ದ ಆರೋಪದಡಿ ಸೂರತ್ ನಲ್ಲಿರುವ ಎರಡು ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಗುಜರಾತ್ ಸರ್ಕಾರ ಬಾಗಿಲು ಮುಚ್ಚಿಸಿದೆ.

Advertisement

ಗುಜರಾತ್ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಆದಂತಹ ನಿತಿನ್ ಪಾಟೀಲ್, ಗುರುವಾರ ವಿಧಾನ ಸಭೆ ಅಧಿವೇಶನದಲ್ಲಿ ಕಪದ್ವಂಜ್ ಕ್ಷೇತ್ರದ ಎಂಎಲ್‍ಎ ಕಲಾಭಾಯ್ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಈ ವಿಚಾರವನ್ನು ತಿಳಿಸಿದರು.

ಸೂರತ್ ನಲ್ಲಿರುವ ಎರಡು ಪ್ರಯೋಗಾಲಯಗಳು ಕೋವಿಡ್ ವರದಿಯ ನಕಲಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದರ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಅಲ್ಲಿರುವ ತೇಜಸ್ ಹಾಗೂ ಹೇಮಜ್ಯೋತಿ ಪ್ರಯೋಗಾಲಯಗಳು ಫೇಕ್ ಸರ್ಟಿಫಿಕೇಟ್‍ಗಳನ್ನು ನೀಡುತ್ತಿದ್ದವು. ಈ ಕುರಿತು ತನಿಖೆ ನಡೆಸಿದ ವೇಳೆ ಅಸಲಿಯತ್ತು ನಮ್ಮ ಗಮನಕ್ಕೆ ಬಂತು. ಇತ್ತೀಚಿಗಷ್ಟೆ ಈ ಲಾಬ್‍ಗಳಿಗೆ ಸರ್ಕಾರ ಅನುಮತಿ ನೀಡಿತ್ತು. ಇದೀಗ ಆ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.

ಇನ್ನು ದೇಶ್ಯಾದ್ಯಂತ ಕೋವಿಡ್ ಎರಡನೇ ಅಲೆ ಆತಂಕ ಎದುರಾಗಿದೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಕೆಲವೊಂದು ರಾಜ್ಯಗಳು ಲಾಕ್‍ಡೌನ್ ಮೊರೆ ಹೋಗಿದ್ದು, ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಂಡಿವೆ. ಹಾಗೂ ಕೋವಿಡ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next