Advertisement

ದೂಧ್ ಸಾಗರ್ ನದಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

03:54 PM Jun 01, 2021 | Team Udayavani |

ಪಣಜಿ: ಧಾರಾಬಾಂದೋಡಾದಲ್ಲಿ ದೂಧ್ ಸಾಗರ್ ನದಿಗೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿದೆ.

Advertisement

ಸಾನಿಯಾ ರಫಿಕ್ ಮುಲ್ಲಾ (17) ಮತ್ತು ಪ್ರದೀಪ ನಿಂಗಪ್ಪ ಮಲನಾವರ್ (16) ವಿದ್ಯಾರ್ಥಿಗಳು ನಾಪತ್ತೆಯಾದ ವಿದ್ಯಾರ್ಥಿಗಳು.

ಈ ವಿದ್ಯಾರ್ಥಿಗಳು ಸೋಮವಾರ ಸಂಜೆ ನಡೆದಿದ್ದು ಮಂಗಳವಾರ ದೂಧ್ ಸಾಗರ್ ನದಿಯಲ್ಲಿ ಈ ವಿದ್ಯಾರ್ಥಿಗಳಿಗಾಗಿ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂಧಿಗಳು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಪೊಂಡಾದ ಕುರ್ಟಿಯ ದಾದಾ ವೈದ್ಯ ವಿದ್ಯಾಲಯದಲ್ಲಿ ಹತ್ತನೇಯ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ತಂಡ ಸೋಮವಾರ ಧಾರಾಬಾಂದೋಡಾದ ದೂಧ್ ಸಾಗರ ನದಿಗೆ ಪ್ರವಾಸಕ್ಕೆ ತೆರಳಿದ್ದರು. ಗೋವಾ ಸರ್ಕಾರವು ಹತ್ತನೇಯ ತರಗತಿಯ ವೊದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆಯೇ ಪಾಸ್ ಮಾಡಲು ಘೋಷಿಸಿದ್ದರಿಂದ, ಇದರ ಆನಂದಕ್ಕೆ ಪಿಕ್‍ನಿಕ್‍ಗೆ ತೆರಳಿದ್ದರು.

ಇದನ್ನೂ ಓದಿ: ಪತ್ನಿ ಆತ್ಮಹತ್ಯೆ : ಯುಟ್ಯೂಬರ್ ಜೀತು ಜಾನ್ ಬಂಧನ

Advertisement

ಸೋಮವಾರ ಸಂಜೆಯ ವೇಳೆಗೆ  ನದಿಯಲ್ಲಿ ಸ್ನಾನ ಮಾಡಿ ಮೇಲೆ ಬರುವ ಸಂದರ್ಭದಲ್ಲಿ ಸಾನಿಯಾ ಕಾಲು ಜಾರಿ ಬಿದ್ದು ತೇಲಿ ಹೋಗುತ್ತಿರುವಾಗ ಆಕೆಯನ್ನು ರಕ್ಷಿಸಲು ಪ್ರದೀಪ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಆದರೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಇಬ್ಬರೂ ನೀರಲ್ಲಿ ತೇಲಿ ಹೋದರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರವಾಸಕ್ಕೆ ತೆರಳಿದ್ದ ಇತರ ವಿದ್ಯಾರ್ಥಿಗಳು ಪೋಲಿಸರಿಗೆ ದೂರು ನೀಡಿದಾಗ ರಾತ್ರಿ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿದರು. ಮಂಗಳವಾರ ಬೆಳಿಗ್ಗೆಯಿಂದ ಇಬ್ಬರು ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ವಿದ್ಯಾರ್ಥಿ ಪ್ರದೀಪ ನಿಂಗಪ್ಪಾ ಮಲನಾವರ್ ಈತನಿಗೆ ಇಬ್ಬರು ಸಹೋದರರಿದ್ದು ತಂದೆ ನಿಂಗಪ್ಪ ಇವರು ದಿನಪತ್ರಿಕೆ ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿನಿ ಸಾನಿಯಾ ಇವಳಿಗೆ ಇಬ್ಬರು ಸಹೋದರರಿದ್ದಾರೆ, ತಂದೆ ಒಬ್ಬ ಕಾರ್ಮಿಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next