ಉತ್ತರ ಪ್ರದೇಶ: ಸಹೋರದರಿಬ್ಬರು ನಿರ್ಮಾಣ ಹಂತದ ಕಟ್ಟಡದ 11ನೇ ಮಹಡಿಯಿಂದ ಹಾರಿ ಒಬ್ಬಾಕೆ ಸಾವನ್ನಪ್ಪಿ, ಮತ್ತೊಬ್ಬಳು ಗಂಭೀರ ಗಾಯಗೊಂಡಿರುವ ಘಟನೆ ನೋಯ್ಡಾ ಸೆಕ್ಟರ್ 96 ರಲ್ಲಿ ನಡೆದಿದೆ.
ಯುವತಿಯರ ತಾಯಿ, ತನ್ನ ಇಬ್ಬರು ಮಕ್ಕಳನ್ನು ಬೇಗ ಮದುವೆ ಮಾಡಿ ಕೊಡಬೇಕೆಂದು ಹೇಳುತ್ತಿದ್ದರು. ಮದುವೆ ಆಗಿ ಎಂದು ತಾಯಿ ಮಕ್ಕಳಿಗೆ ಒತ್ತಾಯ ಮಾಡುತ್ತಿದ್ದರು. ಆದರೆ ಇದು ಇಬ್ಬರಿಗೂ ಇಷ್ಟವಿರಲಿಲ್ಲ. ಮದುವೆಗೆ ನಿರಾಕರಿಸಿದರೂ, ತನ್ನ ತಾಯಿ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಕ್ಕೆ ಸಿಟ್ಟುಗೊಂಡ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಾರೆ.
ಮನೆಯ ಪಕ್ಕ ಇದ್ದ ನಿರ್ಮಾಣ ಹಂತದ ಕಟ್ಟಡದ 11 ನೇ ಮಹಡಿಯಿಂದ ಹಾರಿದ್ದಾರೆ. ಘಟನೆಯಲ್ಲಿ ಒಬ್ಬ ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬಾಕೆ ಗಂಭೀರ ಗಾಯಗೊಂಡು ದಿಲ್ಲಿಯ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಘಟನೆಯಿಂದ ಕುಟುಂಬಸ್ಥರು ಆಘಾತಗೊಳಗಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.