Advertisement

ನಾಲ್ಕೂರು: ಇಬ್ಬರು ಸಹೋದರಿಯರು ನಾಪತ್ತೆ

06:00 AM Jun 03, 2018 | Team Udayavani |

ವೇಣೂರು: ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಿಂದ ಮಂಗಳೂರಿ ಗೆಂದು ತೆರಳಿದ ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಬಗ್ಗೆ ವೇಣೂರು  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಾಲ್ಕೂರು ಗ್ರಾಮದ ಹಾರೆದಡ್ಡ ನಿವಾಸಿ ಡೆನ್ನಿಸ್‌ ಕ್ರಾಸ್ತಾ ಅವರ ಪತ್ನಿ ಆಶಾ (22) ಹಾಗೂ ಆಶಾಳ ತಂಗಿ ಅಶ್ವಿ‌ನಿ (16) ನಾಪತ್ತೆಯಾದವರು. ಇವರು ಮೂಲತಃ ಸೊರಬದವರಾಗಿದ್ದಾರೆ.  ಅಶ್ವಿ‌ನಿ ಮಂಗಳೂರಿನಲ್ಲಿ ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು. ಸೊರಬದಲ್ಲಿ ಇವರಿಗೆ ತಾಯಿ ಹಾಗೂ ಸಂಬಂಧಿಕರಿದ್ದಾರೆ. 

ಜೂ. 29ರಂದು ತಂಗಿ ಅಶ್ವಿ‌ನಿಯನ್ನು ಕಾಲೇಜಿಗೆ ಸೇರಿಸಲೆಂದು ಆಶಾ ಮಂಗಳೂರಿಗೆ ಕರೆದುಕೊಂಡು ಹೋಗಿದ್ದು, ಬಳಿಕ  ನಾಪತ್ತೆಯಾಗಿದ್ದಾರೆ. ಅಶ್ವಿ‌ನಿ 4 ಅಡಿ ಎತ್ತರವಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಆಶಾ 4.9 ಅಡಿ ಎತ್ತರವಿದ್ದು, ಗುಲಾಬಿ ಬಿಳಿ ಬಣ್ಣದ ಮಿಶ್ರಿತ ಚೂಡಿದಾರ ಧರಿಸಿದ್ದಾರೆ. ಇವರ ಮಾಹಿತಿ ದೊರೆತಲ್ಲಿ ವೇಣೂರು  ಠಾಣೆ (08256-286232) ಅಥವಾ ಸ್ಥಳೀಯ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next