Advertisement

ಮುಂಬಯಿ ಜೆಜೆ ಆಸ್ಪತ್ರೆ ರೆಸಿಡೆಂಟ್‌ ವೈದ್ಯರಿಬ್ಬರ ಮೇಲೆ ಹಲ್ಲೆ

05:04 PM May 19, 2018 | Team Udayavani |

ಮುಂಬಯಿ : ವೈದ್ಯಕೀಯ ನಿರ್ಲಕ್ಷ್ಯದ ಕಾರಣ ಮಹಿಳಾ ರೋಗಿಯೊಬ್ಬರು ಮೃತಪಟ್ಟದ್ದನ್ನು ಅನುಸರಿಸಿ ಆಕೆಯ ಮನೆಯವರು ಆಕ್ರೋಶಿತರಾಗಿ ಓರ್ವ ಮಹಿಳೆಯ ಸಹಿತ ಇಬ್ಬರು ರೆಸಿಡೆಂಟ್‌ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇಲ್ಲಿನ ಸರಕಾರಿ ಒಡೆತನದ ಜೆ ಜೆ ಆಸ್ಪತ್ರೆಯಲ್ಲಿ ಇಂದು ನಡೆಯಿತು.

Advertisement

ಪೊಲೀಸರು ಈ ಘಟನೆಯನ್ನು ಅನುಸರಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಸ್ಪತ್ರೆಯ ರೆಸಿಡೆಂಟ್‌ ವೈದ್ಯರು ದಿನಪೂರ್ತಿ ಮುಷ್ಕರ ನಡೆಸಿದ್ದಾರೆ. 

ಗಾಲ್‌ ಬ್ಲಾಡರ್‌ ತೊಂದರೆಯಿಂದ ಬಳಲುತ್ತಿದ್ದ 45ರ ಝೈದಾ ಸನಾಉಲ್ಲಾ ಶೇಖ್‌ ಅವರು ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ. ಆಕೆಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ  ದೊರಕದ ಕಾರಣ ಆಕೆ ಸತ್ತಳೆಂದು ಆರೋಪಿಸಿ ಕ್ರುದ್ಧರಾದ ಆಕೆಯ ಮನೆಯವರು ರೆಸಿಡೆಂಟ್‌ ವೈದ್ಯರಾದ ಡಾ. ಆತಿಷ್‌ ಪಾರೀಕ್‌ ಮತ್ತು ಮಹಿಳಾ ವೈದ್ಯೆಯ ಮೇಲೆ ಹಲ್ಲೆ ನಡೆಸಿದರು ಎಂದು ವರದಿಗಳು ತಿಳಿಸಿವೆ.

ಹಲ್ಲೆಕೋರರು ವಾರ್ಡ್‌ ನಲ್ಲಿ ಧಾಂಧಲೆ ನಡೆಸಿ ಅಲ್ಲಿನ ಉಪಕರಣಗಳಿಗೆ ಹಾನಿ ಉಂಟುಮಾಡಿದ್ದು ಈ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿ ಅದರ ಚಿತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್‌ ಆಗಿವೆ.  

Advertisement

Udayavani is now on Telegram. Click here to join our channel and stay updated with the latest news.

Next