Advertisement

ಪ್ರಸ್ತಾವದಲ್ಲೇ ಉಳಿದ 2 ಪ್ರಮುಖ ರೈಲು ಮಾರ್ಗ ಯೋಜನೆಗಳು

06:40 PM Oct 14, 2020 | mahesh |

ಕಾರ್ಕಳ: ಉಡುಪಿ ಮತ್ತು ದ.ಕ ಜಿಲ್ಲೆಯ ಹಲವು ಪ್ರಮುಖ ಕೇಂದ್ರಗಳ ಮೂಲಕ ಹಾದುಹೋಗುವ ಎರಡು ಪ್ರಮುಖ ಪರ್ಯಾಯ ರೈಲ್ವೇ ಮಾರ್ಗ ಯೋಜನೆಗಳು ದಶಕಗಳಿಂದ ಪ್ರಸ್ತಾವದಲ್ಲೇ ಉಳಿದಿದೆ.

Advertisement

ಬೇಡಿಕೆ ಈಡೇರಿಲ್ಲ
ಪಡುಬಿದ್ರಿ, ಕಾರ್ಕಳ, ಉಜಿರೆ, ಧರ್ಮಸ್ಥಳ ನೆಟ್ಟಣ ಮತ್ತು ನಂದಿಕೂರು, ಕಾರ್ಕಳ, ಬಜಗೋಳಿ ಉಜಿರೆ, ಚಾರ್ಮಾಡಿ  ಈ ಎರಡು ರೈಲ್ವೇ ಮಾರ್ಗಗಳ ಬೇಡಿಕೆ ಈ ವರೆಗೂ ಈಡೇರಿಲ್ಲ. ರೈಲ್ವೇ ಇಲಾಖೆಯಿಂದಲೂ ಇದಕ್ಕೆ ಸ್ಪಂದನೆ ಸಿಗುವ ಲಕ್ಷಣಗಳಿಲ್ಲ. ಈ ಮಾರ್ಗದ ಬದಲಿಗೆ ತುಸು ಬದಲಾವಣೆ ಮಾಡಿಕೊಂಡು ಉಜಿರೆ, ಚಾರ್ಮಾಡಿ-ಕೊಟ್ಟಿಗೆ ಹಾರ ಮೂಲಕ ಮಾರ್ಗ ನಿರ್ಮಾಣದ  ಹೊಸ ಮಾರ್ಗ ಪ್ರಸ್ತಾವನೆಯನ್ನು  ರೈಲ್ವೇ ಇಲಾಖೆ ಮುಂದಿಡಲು ಉಡುಪಿ ರೈಲ್ವೇ ಯಾತ್ರಿಕರ ಸಂಘ ನಿರ್ಧರಿಸಿದೆ.

ಪಡುಬಿದ್ರಿ, ಕಾರ್ಕಳ, ಧರ್ಮಸ್ಥಳ, ನೆಟ್ಟಣ ಮಧ್ಯೆ 120 ಕಿ.ಮೀ. ಹೊಸ  ಮಾರ್ಗದ ಸರ್ವೇ ನಡೆದಿದೆ. ಪ್ರಾಥಮಿಕ ತಾಂತ್ರಿಕ ಮತ್ತು ಸಂಚಾರ ಸರ್ವೇ, ಎಂಜಿನಿಯರಿಂಗ್‌ ಕಮ್‌ ಟ್ರಾಫಿಕ್‌ ಸರ್ವೇ ನಡೆದಿದೆ. ಆದರೆ ಮಾರ್ಗ ರಚನೆ ಕುರಿತು ಯಾವುದೇ ಪ್ರಸ್ತಾವಗಳು ಇಲಾಖೆ ಮಟ್ಟದಲ್ಲಿ ಇದುವರೆಗೂ ಮುನ್ನೆಲೆಗೆ ಬಂದಿಲ್ಲ.

ಪ್ರಸ್ತಾವಕ್ಕೇ ಸೀಮಿತ
ಅವಿಭಜಿತ ಜಿಲ್ಲೆಯ ವ್ಯಾಪ್ತಿಯಲ್ಲಿ  ಪರ್ಯಾಯ ಮಾರ್ಗದ ಪ್ರಸ್ತಾವನೆಯನ್ನು  ರೈಲು ಯಾತ್ರಿಕರ ಸಂಘ  ಈ ಹಿಂದೆಯೇ ರೈಲ್ವೇ ಇಲಾಖೆ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳ ಮುಂದೆ ಇರಿಸಿತ್ತು.  ನಂದಿಕೂರು, ಕಾರ್ಕಳ ಬಜಗೋಳಿ ಉಜಿರೆ ಚಾರ್ಮಾಡಿ ಮೂಲಕ ಸಾಗಿ ಸೋಮನಾಡು ಸೇತುವೆ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆ ಹಾರದಿಂದ ಮೂಡಿಗೆರೆಯಲ್ಲಿ  ರೈಲು ಮಾರ್ಗಕ್ಕೆ ಜೋಡಣೆಯಾಗುತ್ತದೆ. ಅದು ಮುಂದಕ್ಕೆ ರಾಜಧಾನಿ ಬೆಂಗಳೂರಿಗೆ ಸಾಗುವುದು. ಮತ್ತು ನಂದಿಕೂರು ಜಂಕ್ಷನ್‌  ಆಗಿ ರೂಪುಗೊಳ್ಳುವಂತೆ  ಪ್ರಸ್ತಾವದಲ್ಲಿದೆ. ಇವುಗಳು ಪ್ರಸ್ತಾವನೆಗಷ್ಟೆ ಸೀಮಿತವಾಗಿದ್ದು ಹೊರತು ಪಡಿಸಿದೆ ಹೊರತು ಜೀವ ಪಡೆದುಕೊಂಡಿಲ್ಲ.

ರೈಲ್ವೇ ಸಂಪರ್ಕವಿಲ್ಲದ 3 ತಾಲೂಕು
ಜಿಲ್ಲೆಗಳ ಇಲ್ಲಿನ ವಿವಿಧ ಪಕ್ಷದ ನಾಯಕರು ದೊಡ್ಡ ಹುದ್ದೆ ನಿಭಾಯಿಸಿದ್ದರೂ, ಕರಾವಳಿ ಜಿಲ್ಲೆಯವರೇ ರೈಲ್ವೇ ಮಂತ್ರಿ ಆಗಿದ್ದರೂ ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ  ಈ ಮೂರು ತಾಲೂಕುಗಳು ರೈಲ್ವೇ ಸಂಪರ್ಕಕ್ಕೆ ಬಂದಿಲ್ಲ. ರೈಲು ಮಾರ್ಗ ನಿರ್ಮಾಣವಾದರೆ ಧರ್ಮಸ್ಥಳಕ್ಕೂ ತೆರಳುವ ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತಿತ್ತು.

Advertisement

ಬೆಂಗಳೂರಿಗೆ ಹತ್ತಿರದ ಮಾರ್ಗ
2010 ರೈಲ್ವೇ ಬಜೆಟ್‌ನಲ್ಲಿ ರೈಲ್ವೇ ಮಾರ್ಗ ಸಮೀಕ್ಷೆಗೆ ಅಂದು ರೈಲ್ವೇ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅನುಮೋದನೆ ನೀಡಿದ್ದರು. ಈ ಯೋಜನೆ  ಕಾರ್ಯಗತವಾಗಿದ್ದಲ್ಲಿ  ಕುಂದಾಪುರ ಉಡುಪಿ ಕಡೆಯಿಂದ ಬೆಂಗಳೂರಿಗೆ ಪರ್ಯಾಯ ರೈಲ್ವೇ ಲಿಂಕ್‌ ಆಗಿ 4 ಗಂಟೆ ಪ್ರಯಾಣ ಕಡಿಮೆಯಾಗುತ್ತಿತ್ತು. ಅನಂತರದಲ್ಲಿ ಜಿಲ್ಲೆಯವರೇ ಕೇಂದ್ರದಲ್ಲಿ  ರೈಲ್ವೇ ಮಂತ್ರಿಯಾಗಿದ್ದರೂ ಬೇಡಿಕೆ ಗಳು ಈಡೇರದೇ ಉಳಿದಿದೆ.

ಇಂದು  ಸಭೆ
ರೈಲ್ವೇಬೇಡಿಕೆಗಳಿಗೆ ಮನ್ನನೆ ಸಿಗದೇ ಇರುವುದಕ್ಕೆ ಬೇಸರವಿದೆ.  ಈಗಿರುವ ಪ್ರಸ್ತಾವಗಳು ನನೆಗುದಿಗೆ ಬಿದ್ದಿರುವುದರಿಂದ ಹಿಂದಿನ ಪ್ರಸ್ತಾವದ ಮಾರ್ಗ ಗಳಲ್ಲಿ ಒಂದಷ್ಟು ಬದಲಾವಣೆಯೊಂದಿಗೆ ಮತ್ತೆ ಪ್ರಸ್ತಾವ ಮಂಡಿಸಲಿದ್ದು, ಈ ಬಗ್ಗೆ ಅ.15ರಂದು ಉಡುಪಿಯಲ್ಲಿ ಯಾತ್ರಿಕರ ಸಂಘದ ತುರ್ತು ಸಭೆ ಕರೆದಿದ್ದೇವೆ.
-ಆರ್‌.ಎಲ್‌ ಡಯಾಸ್‌,  ಅಧ್ಯಕ್ಷರು, ಉಡುಪಿ ರೈಲ್ವೇ ಯಾತ್ರಿಕರ ಸಂಘ

ಅನುಮೋದನೆ ಸಿಗಬೇಕು
ರೈಲ್ವೇ ಮಾರ್ಗದ ಬಗ್ಗೆ ಬೇಡಿಕೆಗಳು  ಸಾಕಷ್ಟು ವರ್ಷಗಳಿಂದ ಇವೆ. ಈ ಹಿಂದೆಯೇ ಪ್ರಸ್ತಾವಗಳು ರೈಲ್ವೇ ಇಲಾಖೆಗೆ ಹೋಗಿವೆ. ರೈಲ್ವೇ ಮಂಡಳಿಯಿಂದ ಇದಕ್ಕೆ ಅನುಮೋದನೆ ಸಿಗಬೇಕಿದೆ.
– ಕೆ.ಸುಧಾಕೃಷ್ಣ ಮೂರ್ತಿ ಸಾರ್ವಜನಿಕ ಸಂಪರ್ಕಧಿಕಾರಿ 

ಬೆಂಗಳೂರಿಗೆ ಹತ್ತಿರದ ಮಾರ್ಗ
2010 ರೈಲ್ವೇ ಬಜೆಟ್‌ನಲ್ಲಿ ರೈಲ್ವೇ ಮಾರ್ಗ ಸಮೀಕ್ಷೆಗೆ ಅಂದು ರೈಲ್ವೇ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅನುಮೋದನೆ ನೀಡಿದ್ದರು. ಈ ಯೋಜನೆ  ಕಾರ್ಯಗತವಾಗಿದ್ದಲ್ಲಿ  ಕುಂದಾಪುರ ಉಡುಪಿ ಕಡೆಯಿಂದ ಬೆಂಗಳೂರಿಗೆ ಪರ್ಯಾಯ ರೈಲ್ವೇ ಲಿಂಕ್‌ ಆಗಿ 4 ಗಂಟೆ ಪ್ರಯಾಣ ಕಡಿಮೆಯಾಗುತ್ತಿತ್ತು. ಅನಂತರದಲ್ಲಿ ಜಿಲ್ಲೆಯವರೇ ಕೇಂದ್ರದಲ್ಲಿ  ರೈಲ್ವೇ ಮಂತ್ರಿಯಾಗಿದ್ದರೂ ಬೇಡಿಕೆ ಗಳು ಈಡೇರದೇ ಉಳಿದಿದೆ.

10  ವರ್ಷಗಳಿಂದ ಸರ್ವೇಗೆ  ಉಡುಪಿ ರೈಲ್ವೇ ಯಾತ್ರಿಕರ ಸಂಘ ಆಗ್ರಹ
148 ಕಿ.ಮೀ. ಹೊಸ ರೈಲು ಮಾರ್ಗ ಸರ್ವೇಗೆ ಆಗ್ರಹ

ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next