Advertisement

ಕೋಲಾರದಲ್ಲಿ ಮತ್ತೆ ಎರಡು ಪಾಸಿಟಿವ್‌

06:55 AM May 22, 2020 | Lakshmi GovindaRaj |

ಕೋಲಾರ: ಜಿಲ್ಲೆಯಲ್ಲಿ ಬಂಗಾರಪೇಟೆ ಹಾಗೂ ಮುಳಬಾಗಿಲನಲ್ಲಿ ತಲಾ ಒಂದೊಂದು ಕೋವಿಡ್‌ 19 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಮಂಡ್ಯ ಮೂಲದ ವ್ಯಕ್ತಿಯೂ ಸೇರಿದಂತೆ ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್‌ 19  ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ಈಗ ಪತ್ತೆಯಾಗಿರುವ ಎರಡೂ ಪಾಸಿಟಿವ್‌ ಪ್ರಕರಣಗಳ ಪೈಕಿ ಬಂಗಾರಪೇಟೆಯ ಮೊದಲ ಪ್ರಕರಣ ಚೆನ್ನೈ ಮಾರುಕಟ್ಟೆಗೆ ತೆರಳಿದ್ದ ಚಾಲಕನಲ್ಲಿ ಪತ್ತೆಯಾಗಿದೆ. 42 ವರ್ಷದ  ಪಿ.1587 ಈ ಚಾಲಕನನ್ನು ಚೆನ್ನೈಗೆ ಹೋಗಿ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.

Advertisement

ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್‌ 19 ಪಾಸಿಟಿವ್‌ ಬಂದಿದೆ. ಮತ್ತೂಂದು ಪ್ರಕರಣದಲ್ಲಿ ಮುಳಬಾಗಿ ನಲ್ಲಿ  ಪತ್ತೆಯಾಗಿದ್ದ  ತರಕಾರಿ ವ್ಯಾಪಾರಿ ಪಿ.1128ರ 32 ವರ್ಷದ ಪತ್ನಿ ಪಿ.1588 ಯಲ್ಲಿ ಪಾಸಿಟಿವ್‌ ಪತ್ತೆಯಾಗಿದೆ. ಇದರಿಂದ ಗುರುವಾರ ಕೋಲಾರ ಜಿಲ್ಲೆಯಲ್ಲಿ ಎರಡು ಪಾಸಿಟಿವ್‌ ಪ್ರಕರಣಗಳು ಪತ್ತೆಯಾದಂ ತಾಗಿದೆ. ಈ ಎರಡೂ ಹೊರಜಿಲ್ಲೆಗಳ ಇತಿಹಾಸ  ಹೊಂದಿರುವುದರಿಂದ ಸದ್ಯಕ್ಕೆ ಜಿಲ್ಲಾಡಳಿತ ಹಾಗೂ ಜನತೆ ಕೊಂಚ ಸಮಾಧಾನಪಟ್ಟುಕೊಳ್ಳುವಂತಾಗಿದೆ.

31ರವರೆಗೆ ನಿಷೇಧಾಜ್ಞೆ ಜಾರಿ: ಕೋವಿಡ್‌ 19 ವೈರಸ್‌ ಸೋಂಕು ಹರಡದಂತೆ ತಡೆಯುವ ಸಲುವಾಗಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ಮೇ 31ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ  ಸಿ.ಸತ್ಯಭಾಮ ಆದೇಶಿಸಿದ್ದಾರೆ. ಈ ನಿಷೇಧಾಜ್ಞೆ ಅವಧಿಯಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಸಾರ್ವಜನಿಕರು ಅನಗತ್ಯ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎಪಿಎಂಸಿ, ರೇಷ್ಮೆ ಮಾರುಕಟ್ಟೆಗಳಿಗೆ  ವಿನಾಯಿತಿ ನೀಡಲಾಗಿದೆ.

ಮುಂದಿನ ಭಾನುವಾರ ಅಂದರೆ ಮೇ 24 ಮತ್ತು ಮೇ 31 ರಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಪಿಎಂಸಿ ಮತ್ತು ರೇಷ್ಮೆ ಮಾರುಕಟ್ಟೆ ಒಳಗೊಂಡಂತೆ ಸಂಪೂರ್ಣ ದಿನ ಪೂರ್ತಿ ನಿಷೇಧಾಜ್ಞೆ  ಜಾರಿಗೊಳಿಸಿ ಆದೇಶಿಸಿದೆ. ಕೇಂದ್ರ ಗƒಹ ಮಂತ್ರಾಲಯದಿಂದ ಹಾಗೂ ರಾಜ್ಯ ಸರ್ಕಾರದ ವಿನಾಯಿತಿ ನೀಡಲಾಗಿರುವ ಸೇವೆಗಳಿಗೆ ಸಂಬಂಧಪಟ್ಟ ಸಂಸ್ಥೆಗಳು, ಸಿಬ್ಬಂದಿಗಳು ಕೊವಿಡ್‌-19 ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು  ವಹಿಸುವುದು,

ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಸಲಹೆ ಸೂಚನೆಗಳಂತೆ ಅಗತ್ಯ ಕ್ರಮಗಳನ್ನು ವಹಿಸಬೇಕು ಹಾಗೂ ಸಾಮಾಜಿಕ ಅಂತವನ್ನು ಕಾಯ್ದುಕೊಳ್ಳಬೇಕು. ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ  ಅಂತವರ ವಿರುದ್ಶ ವಿಪತ್ತು ನಿರ್ವಹಣಾ ಕಾಯ್ದೆ ಕಲಂ 51 ರಿಂದ 60ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188ರ ರೀತಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next