Advertisement
ಕೋರಮಂಗಲ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್ ಮತ್ತು ಸಂತೋಷ್ ಬಂಧಿತರು. ಆರೋಪಿತ ಕಾನ್‌ಸ್ಟೇಬಲ್‌ಗಳು ಕೆಲ ದಿನಗಳ ಹಿಂದೆ ಗಾಂಜಾ ತುಂಬಿದ್ದ ಸಿಗರೇಟ್ ಸೇವಿಸುತ್ತಿದ್ದ ಆಟೋ ಚಾಲಕನ ಇಲಿಯಾಸ್‌ನನ್ನು ಬೆದರಿಸಿ ಒಂದು ಲಕ್ಷ ರೂ.ಗೆ ಬೇಡಿಕೆಯಿಟ್ಟು 5 ಸಾವಿರ ರೂ. ಲಂಚ ಪಡೆದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಿಸಿಬಿಗೆ ವರ್ಗಾವಣೆಯಾದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
Related Articles
Advertisement
ಇಬ್ಬರು ಪೆಡ್ಲರ್‌ಗಳು ವಶಕ್ಕೆ
ಮತ್ತೂಂದೆಡೆ ಡ್ರಗ್ಸ್ ಪ್ರರಕಣದ ಪ್ರಮುಖ ಆರೋಪಿಗಳಾದ ಅಖೀಲ್ ರಾಜ್ ಮತ್ತು ಅಮ್ಜದ್ ಖಾನ್‌ನನ್ನು ಸಿಸಿಬಿ ಪೊಲೀಸರು ಮತ್ತೂಮ್ಮೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಷ್ಟು ದಿನಗಳಿಂದ ಕಾನ್‌ಸ್ಟೇಬಲ್‌ಗಳ ಜತೆ ವ್ಯವಹಾರ ನಡೆಸುತ್ತಿದ್ದಿರಾ? ಗಾಂಜಾ ದಂಧೆಯ ರೂವಾರಿಗಳು ಯಾರು? ಇನ್ನು ಯಾರೆಲ್ಲ ಸಂಪರ್ಕದಲ್ಲಿದ್ದಾರೆ? ಎಂಬೆಲ್ಲ ವಿಚಾರಣೆ ನಡೆಯುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಇನ್ಸ್‌ಪೆಕ್ಟರ್‌ಗೆ ಗಾಂಜಾ ಪ್ರಕರಣ ಮೊದಲೇ ತಿಳಿದಿತ್ತಾ?
ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಕಾನ್‌ಸ್ಟೇಬಲ್‌ಗಳು ಗಾಂಜಾ ದಂಧೆಕೋರರ ಜತೆ ಭಾಗಿಯಾಗಿರುವ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ಗೆ ಈ ಮೊದಲೇ ತಿಳಿದಿತ್ತು ಎನ್ನಲಾಗಿದೆ. ಇಬ್ಬರು ಪೊಲೀಸ್ ಇಲಾಖೆಯಲ್ಲಿರುವುದರಿಂದ ಪ್ರಕರಣ ದಾಖಲಿಸದೇ ನೇರವಾಗಿ ಆರೋಪಿಗಳನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು ಎನ್ನಲಾಗಿದೆ. ಆದರೆ, ಸಿಸಿಬಿ ಪೊಲೀಸರು ಇಲಾಖೆಗೆ ಕಪ್ಪು ಚುಕ್ಕೆ ಬರುತ್ತದೆ ಎಂದು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಯಾವುದೇ ಕ್ರಮಕೈಗೊಳ್ಳದೆ ಕಳುಹಿಸಿದ್ದರು ಎಂದು ಹೇಳಲಾಗಿದೆ. ನಂತರ ಕೋರಮಂಗಲ ಠಾಣೆಗೆ ವರ್ಗಾವಣೆಗೊಂಡು ದಂಧೆಕೋರರ ಜತೆ ವ್ಯವಹಾರ ಮುಂದುವರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.