Advertisement

ಹಳಿ ದಾಟುತ್ತಿದ್ದ ತಾಯಿ-ಮಗಳ ಮೇಲೆ ರೈಲು ಹರಿದು ದಾರುಣ ಸಾವು

04:15 PM Apr 15, 2017 | Team Udayavani |

ಹೌಡಾ : ಇಲ್ಲಿನ ಬಲ್ಲಿ ರೈಲು ನಿಲ್ದಾಣ ಸಮೀಪ ರೈಲು ಹಳಿಯನ್ನು ದಾಟುತ್ತಿದ್ದ ಓರ್ವ ಮಹಿಳೆ ಮತ್ತು ಆಕೆಯ 7 ವರ್ಷ ಪ್ರಾಯ ಮಗಳ ಮೇಲೆ ವೇಗವಾಗಿ ಧಾವಿಸಿ ಬಂದು ರೈಲು ಹರಿದು ಅವರಿಬ್ಬರೂ ದಾರುಣವಾಗಿ  ಮೃತಪಟ್ಟ ಘಟನೆ ವರದಿಯಾಗಿದೆ.

Advertisement

32 ವರ್ಷ ಪ್ರಾಯದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಗೋಘಾಟ್‌ ರೈಲು ಹರಿಯಿತು. ಸ್ಥಳದಲ್ಲೇ ಮೃತಪಟ್ಟಿರುವ ತಾಯಿ – ಮಗಳ ದೇಹ ಛಿದ್ರ ಛಿದ್ರವಾಗಿರುವುದರಿಂದ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next