ಮೂಲ್ಕಿ: ಬೆಂಗಳೂರಿನಿಂದ ಕಾರು ಕದ್ದು ಕರಾವಳಿಯಲ್ಲಿ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರಿನ ಜಯನಗರ ಬನ್ನೇರು ಘಟ್ಟ ನಿವಾಸಿ ವಾಸೀಮ್ ಪಾಷಾ(25) ಹಾಗೂ ತೀರ್ಥಹಳ್ಳಿಯ ಮಾರ್ಕೇಟು ಬಳಿಯ ನಿವಾಸಿ ಮಹಮ್ಮದ್ ತೋಯಬ್(26) ಬಂಧಿತರು.
ಬೆಂಗಳೂರಿನ ಜಯನಗರದ ಮನೆಯೊಂದರ ಎದುರಿನಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಕಳ್ಳತನ ನಡೆಸಿರುವ ಇಬ್ಬರು ಆರೋಪಿಗಳು ಉಡುಪಿ ಕಡೆಯಿಂದ ಮಂಗಳೂರಿನತ್ತ ಕಾರಿನಲ್ಲಿ ಹೋಗುತ್ತಿದ್ದಾಗ ಕೊಲಾ°ಡು ಬಳಿ ಗಸ್ತು ನಡೆಸುತ್ತಿದ್ದ ಮೂಲ್ಕಿ ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಮತ್ತು ಅವರ ತಂಡ ದಾಖಲೆಗಳನ್ನು ಕೇಳಿದಾಗ ಒದಗಿಸಲು ವಿಫಲರಾದಾರು. ಸಂಶಯಗೊಂಡ ಪೊಲೀಸರು ತೀವ್ರವಾಗಿ ತನಿಖೆಗೆ ಒಳಪಡಿಸಿದಾಗ ಕಾರು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಮಂಗಳೂರು ಪೊಲೀಸ್ ಕಮೀಷನರ್ ಟಿ.ಎಸ್. ಸುರೇಶ್ ಮತ್ತು ಕಾನೂನು ಸುವ್ಯವಸ್ಥೆ ಉಪ ಆಯುಕ್ತರಾದ ಶಾಂತಾರಾಜು ಮತ್ತು ಟ್ರಾಫಿಕ್ ಉಪ ಆಯುಕ್ತರಾದ ಹನುಮಂತರಾಯ, ಪಣಂಬೂರು ಎ.ಸಿ.ಪಿ. ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ಇನ್ಸ್‌ಪೆಕ್ಟರ್ ಅನಂತಪದ್ಮನಾಭ ಅವರು ಕೇಸು ದಾಖಲಿಸಿದ್ದಾರೆ. ಪಿ.ಎಸ್. ಐ. ಚಂದ್ರಶೇಖರಯ್ಯ ಮತ್ತು ಎ.ಎಸ್.ಐ. ಚಂದ್ರಶೇಖರ ಮತ್ತು ಹೆಡ್‌ಕಾನ್ಸ್ ಸ್ಟೆಬಲ್ ಧಮೇಂದ್ರ ಹಾಗೂ ಅಣ್ಣಪ್ಪ, ಬಸವರಾಜ ಹಾಗೂ ಹೋಮ್‌ಗಾರ್ಡ್ ಪ್ರಸಾದ ಕಾಮತ್ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.