Advertisement
ಕೊಲ್ಲಂ-6, ತೃಶ್ಶೂರ್-4, ತಿರುವ ನಂತ ಪುರ, ಕಣ್ಣೂರು-3, ಪತ್ತ ನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಕೋಯಿಕ್ಕೋಡ್, ಕಾಸರಗೋಡು ಜಿಲ್ಲೆ ಗಳಲ್ಲಿ ತಲಾ 2, ಎರ್ನಾಕುಳಂ, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ.
ಜಿಲ್ಲೆಯೊಳಗೆ ವಾಹನದ ಆಸನ ಸಾಮರ್ಥ್ಯದ ಶೇ. 50 ಮಂದಿ ಪ್ರಯಾ ಣಿಕ ರನ್ನು ಕರೆದೊಯ್ಯು ಷರತ್ತಿ ನೊಂದಿಗೆ ಸಾರ್ವಜನಿಕ ಸಾರಿಗೆ ಯನ್ನು ಆರಂಭಿಸಬಹುದು. ನಿಂತು ಪ್ರಯಾ ಣಿಸಲು ಅನುಮತಿಯಿಲ್ಲ. ಜಿಲ್ಲೆ ಯೊಳಗೆ ವಾಹನಗಳ, ಜನರ ಸಂಚಾರಕ್ಕೆ ತಡೆಯಿಲ್ಲ. ಅಂತರ್ ಜಿಲ್ಲಾ ಪ್ರಯಾಣಗಳಲ್ಲಿ ಸಾರ್ವಜನಿಕ ಸಾರಿಗೆ ಇರುವುದಿಲ್ಲ. ಇತರ ವಾಹನಗಳಲ್ಲಿ ಪ್ರಯಾಣಿಸಬಹುದು. ಬೆಳಗ್ಗೆ 7ರಿಂದ ಸಂಜೆ 7 ರ ವರೆಗೆ ಮಾತ್ರವೇ ಅವಕಾಶ. ಇದಕ್ಕೆ ಪಾಸ್ ಅಗತ್ಯವಿಲ್ಲ. ಆದರೆ ಗುರುತು ಚೀಟಿ ಬೇಕು.
Related Articles
ಇತರ ರಾಜ್ಯಗಳಿಂದ ಕೇರಳ ಪ್ರವೇಶಿ ಸಲು ಪಾಸ್ ಮಂಜೂರು ಮಾಡುವ ವಿಚಾರದಲ್ಲಿ ಕಾಸರ ಗೋಡು ಜಿಲ್ಲೆಗೆ 5ನೇ ಸ್ಥಾನವಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಜಿಲ್ಲೆಯಲ್ಲಿ ಈ ವರೆಗೆ ಶೇ. 80.83 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Advertisement
19 ಪ್ರಕರಣ ದಾಖಲುಲಾಕ್ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 19 ಪ್ರಕರಣಗಳನ್ನು ದಾಖ ಲಿಸಿಕೊಳ್ಳಲಾಗಿದೆ. 21 ಮಂದಿಯನ್ನು ಬಂಧಿಸಲಾಗಿದ್ದು, 11 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.