-ಇದು ಹೊಸದಿಲ್ಲಿಯಲ್ಲಿದ್ದ ಪಾಕ್ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳ ಗೂಢಚಾರಿಕೆಯ ಕುತಂತ್ರ. ಈ ಆರೋಪದ ಹಿನ್ನೆಲೆಯಲ್ಲಿ ಅಬೀದ್ ಹುಸೇನ್ (42) ಮತ್ತು ಮೊಹಮ್ಮದ್ ತಾಹಿರ್ ಖಾನ್ (44) ಎಂಬ ಈ ಇಬ್ಬರನ್ನು ದೇಶದಿಂದ ಹೊರಹಾಕಲಾಗಿದೆ. ಇವರಿಬ್ಬರು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲದಡಿ ಕೆಲಸ ಮಾಡುತ್ತಿದ್ದರು.
Advertisement
ಈ ಇಬ್ಬರೂ ಸೇನೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಕಲೆಹಾಕುತ್ತಿರುವ ಬಗ್ಗೆ ಸೇನೆಯ ಗುಪ್ತಚರ ಇಲಾಖೆ ವಾರದ ಹಿಂದೆಯೇ ಮಾಹಿತಿ ಸಂಗ್ರಹಿಸಿತ್ತು. ತಮ್ಮ ಕಾರ್ಯಕ್ಕೆ ಸೇನೆಯ ಸಿಬಂದಿಯನ್ನೇ ಇವರು ಬಳಸಿಕೊಳ್ಳುತ್ತಿದ್ದರು. ಅವರನ್ನು ಸಂಪರ್ಕಿಸಿ, ಭಾರತೀಯರೆಂದು ಪರಿಚಯಿಸಿಕೊಂಡು ಬಳಿಕ ಅವರಿಂದ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಅವರು ಯಾರನ್ನು ಸ್ನೇಹಿತರನ್ನಾಗಿಸಿಕೊಳ್ಳಬೇಕು ಎಂಬುದನ್ನು ಐಎಸ್‌ಐ ನಿರ್ಧರಿಸುತ್ತಿತ್ತು!
ವಶಕ್ಕೆ ಒಳಗಾದ ಅನಂತರವೂ ಈ ಇಬ್ಬರೂ ತಾವು ದಿಲ್ಲಿ ನಿವಾಸಿಗಳು ಎಂದಿದ್ದಾರೆ. ಪೂರಕ ದಾಖಲೆಯಾಗಿ ಆಧಾರ್ ಕಾರ್ಡ್ ನೀàಡಿದ್ದ! ಅದರಲ್ಲಿ ಆತನ ಹೆಸರು ತಪ್ಪಾಗಿ ಮುದ್ರಿತವಾಗಿದ್ದು, ಅದೂ ನಕಲಿ ಎಂಬುದು ಪತ್ತೆಯಾಗಿದೆ. ಸಾಕ್ಷ್ಯ ಸಹಿತ ಹಿಡಿದರು!
ಇವರಿಬ್ಬರ ಮೇಲೆ ಕೆಲವು ದಿನಗಳಿಂದ ನಿಗಾ ಇಡಲಾಗಿತ್ತಲ್ಲದೆ, ಸಾಕ್ಷ್ಯಸಹಿತ ಹಿಡಿದುಹಾಕಲು ವಿಶೇಷ ತಂಡ ರಚಿಸಲಾಗಿತ್ತು. ಇತ್ತೀಚೆಗೆ ಸೇನೆಯ ರಹಸ್ಯ ದಾಖಲೆಗಳನ್ನು ತರುವುದಾಗಿ ಹೇಳಿದ್ದ ಭಾರತೀಯನೊಬ್ಬನನ್ನು ಭೇಟಿ ಮಾಡಲು ಇವರು ತೆರಳಿದ್ದರು. ಆ ವ್ಯಕ್ತಿಯಿಂದ ದಾಖಲೆ ಪಡೆದು ಹಣ ಮತ್ತು ಐಫೋನ್ ಉಡುಗೊರೆಯಾಗಿ ನೀಡಿದರು. ತತ್‌ಕ್ಷಣವೇ ಮರೆಯಲ್ಲಿ ಅವಿತಿದ್ದ ಸೇನಾ ಗುಪ್ತಚರ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಮೂವರನ್ನು ಮತ್ತು ಆ ಅಧಿಕಾರಿಗಳನ್ನು ಕರೆದೊಯ್ದಿದ್ದ ಜಾವೇದ್ ಹುಸೇನ್ (36) ಎಂಬ ಕಾರು ಚಾಲಕನನ್ನು ವಶಕ್ಕೆ ಪಡೆದರು. ಜಾವೇದ್ ಹುಸೇನ್ ಪಾಕಿಸ್ಥಾನದ ಭಕ್ಕಾರ್ ಎಂಬ ಊರಿನವನಾಗಿದ್ದು , ಇಂಥ ಕೆಲಸಗಳಿದ್ದಾಗ ಈ ಅಧಿಕಾರಿಗಳನ್ನು ನಿಗದಿತ ಸ್ಥಳಕ್ಕೆ ಕರೆದೊಯ್ದು ಮತ್ತೆ ಅವರನ್ನು ಹೈಕಮಿಷನ್ ಕಚೇರಿಗೆ ತಲುಪಿಸುತ್ತಿದ್ದ.