Advertisement

ಭೂಮಿಗೆ ಇನ್ನೆರಡು ಚಂದ್ರ!

09:51 AM Nov 08, 2018 | Harsha Rao |

ವಾಷಿಂಗ್ಟನ್‌: ಭೂಮಿಗೆ ಕೇವಲ ಒಂದು ಚಂದ್ರನಲ್ಲ. ಇನ್ನೂ ಎರಡು ಚಂದ್ರರಿದ್ದಾರೆ ಎಂಬುದಕ್ಕೆ ಈಗ ಮತ್ತಷ್ಟು ಸಾಕ್ಷ್ಯ ಸಿಕ್ಕಿದೆ. ಇತ್ತೀಚೆಗೆ ನ್ಯಾಷನಲ್‌ ಜಿಯೋಗ್ರಫಿಕ್‌ ವರದಿ ಪ್ರಕಾರ ಹಂಗೇರಿಯ ಬಾಹ್ಯಾಕಾಶ ತಜ್ಞರು ಹಾಗೂ ಭೌತಶಾಸ್ತ್ರಜ್ಞರು ಈ ಬಗ್ಗೆ ಇನ್ನಷ್ಟು ದತ್ತಾಂಶಗಳನ್ನು ಪೋಣಿಸಿದ್ದಾರೆ. ಸುಮಾರು 50 ವರ್ಷಗಳಿಂದಲೂ ಈ ಬಗ್ಗೆ ವಿಜ್ಞಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಎರಡೂ ಚಂದ್ರರು ಧೂಳಿನಿಂದ ತುಂಬಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Advertisement

ಇದಕ್ಕೆ ಕೊರ್ಡಿಲೆವ್‌ಸ್ಕಿ ಎಂದು ಹೆಸರಿಡ ಲಾಗಿದ್ದು, ಪೋಲೆಂಡ್‌ ಬಾಹ್ಯಾಕಾಶ ತಜ್ಞ ಕಜಿಮೀರ್ಸ್‌ ಕೊರ್ಡಿಲೆವ್‌ಸ್ಕಿ 1961ರಲ್ಲಿ ಈ ಬಗ್ಗೆ ಮೊದಲು ಪ್ರಸ್ತಾಪಿಸಿದ್ದರು. ಇವರ ನೆನಪಿಗಾಗಿ ಇದಕ್ಕೆ ಕೊರ್ಡಿಲೆವ್‌ಸ್ಕಿ ಎಂದು ಹೆಸರಿಸಲಾಗಿದೆ. ಭೂಮಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚು ದೊಡ್ಡದಾಗಿದೆ. 65 ಸಾವಿರ ಮೈಲು ವ್ಯಾಪ್ತಿಯನ್ನು ಇದು ಹೊಂದಿದೆ ಎನ್ನಲಾಗಿದೆ.

ಸುಮಾರು ಒಂದು ಮೈಕ್ರೋಮೀಟರಿನಷ್ಟು ಸಣ್ಣ ಧೂಳಿನ ಕಣಗಳಿಂದ ಇದು ರೂಪಿಸ ಲ್ಪಟ್ಟಿದೆ. ಸೂರ್ಯನ ಕಿರಣಗಳು ಈ ಧೂಳಿನ ಕಣಗಳ ಮೇಲೆ ಬಿದ್ದಾಗ ಇವು ಪ್ರಕಾಶಮಾನ ವಾಗಿ ಹೊಳೆಯುತ್ತವೆ. ಈ ಧೂಳಿನ ಕಣಗಳು ಆಗಾಗ್ಗೆ ತನ್ನ ಸ್ಥಾನ ಬದಲಾಯಿಸುತ್ತಿರುತ್ತವೆ. ಕೋಟ್ಯಂತರ ವರ್ಷಗಳಿಂದಲೂ ಇವು ಅಸ್ತಿತ್ವದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next