Advertisement
ವಾಟ್ಸ್ಯಾಪ್ ನ ಈ ಎರಡು ಹೊಸ ಸೇರ್ಪಡೆಗಳು ವಾಯ್ಸ್ ನೋಟ್ ಹಾಗೂ ಸ್ಟಿಕರ್ ಪ್ಯಾಕ್ ಗಳಿಗೆ ಸಂಬಂಧಿಸಿದ್ದಾಗಿದ್ದು, ಆ್ಯಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರದಲ್ಲೇ ಬಳಕೆಗೆ ಸಿಗಲಿದೆ.
Related Articles
Advertisement
ವಾಟ್ಸ್ಯಾಪ್ ಬೀಟಾದಲ್ಲಿ ಎರಡು ವಿಶೇಷತೆಗಳನ್ನು ಉನ್ನತೀಕರಿಸಿದ ನಂತರ, ಬಳಕೆದಾರರು ತಮ್ಮ ಸ್ನೇಹಿತರಿಗೆ ಸ್ಟಿಕ್ಕರ್ ಪ್ಯಾಕ್ ಗಳನ್ನು ಫಾರ್ವರ್ಡ್ ಮಾಡಲು ಸಾಧ್ಯವಾಗಲಿದೆ. ವಾಟ್ಸ್ಯಾಪ್ ನಿಂದ ಡೌನ್ ಲೋಡ್ ಮಾಡಲಾದ ಸ್ಟಿಕರ್ ಪ್ಯಾಕ್ ಗಳನ್ನು ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ. ಇನ್ನು, ಐಫೋನ್ ಬಳಕೆದಾರರಿಗಾಗಿ ಸ್ಟಿಕರ್ ಪ್ಯಾಕ್ ಗಳ ವೈಶಿಷ್ಟ್ಯವು ಈಗಾಗಲೇ ವಾಟ್ಸ್ಯಾಪ್ ನಲ್ಲಿ ಈಗಾಗಲೇ ಬಳಕೆಗೆ ಲಭ್ಯವಿದೆ.
ವಾಯ್ಸ್ ನೋಟ್ ವೇವ್ ಫಾರ್ಮ್ ನಲ್ಲಿ ತುಸು ಸಮಸ್ಯೆ..!?
ಬೇರೆ ಬೇರೆ ಸ್ಥಳಗಳಿಂದ ವಾಯ್ಸ್ ನೋಟ್ ಗಳನ್ನು ಕಳುಹಿಸುವಾಗ ಕೆಲವು ಬಳಕೆದಾರರಿಗೆ ಸಮಸ್ಯೆ ಎದುರಾಗಬಹುದು. ಯಾಕೆಂದರೆ, ವಾಯ್ಸ್ ನೋಟ್ಸ್ ವೇವ್ ಫಾರ್ಮ್ ಗಳು ಡಾರ್ಕ್ ಮೋಡ್ ನಲ್ಲಿ ಹೆಚ್ಚು ಕಾಣಿಸುವುದಿಲ್ಲಿ, ಹಾಗಾಗಿ ಈ ವಿಶೇಷತೆ ಕೆಲವು ಬಳಕದಾರರಿಗೆ ಕೆಲವು ಸಂದರ್ಭದಲ್ಲಿ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗಿದೆ.
ಇನ್ನು, ಈ ಮೇಲೆ ಹೇಳಿದ ಹಾಗೆ, ಸದ್ಯ ವಟ್ಸ್ಯಾಪ್ ನೀಡಲು ಹೊರಟಿರುವ ಈ ಎರಡು ಹೊಸ ವಿಶೇಷತೆಗಳು ಪ್ರಸ್ತುತ, ಈ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಈ ಹೊಸ ವಿಶೇಷತೆಗಳು ಐಒಎಸ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಸಂಸ್ಥೆಯ ಆಂತರಿಕ ಮೂಲಗಳು ಹೇಳಿರುವುದಾಗು ವರದಿ ತಿಳಿಸಿದೆ.
ಇದನ್ನೂ ಓದಿ : ಆಮ್ ಆದ್ಮಿ ಪಕ್ಷಕ್ಕೆ ಉದ್ಯಮಿ ಮಹೇಶ್ ಸಾವನಿ ಸೇರ್ಪಡೆ ಬೆಳವಣಿಗೆಯ ಸಂಕೇತ : ಮನೀಶ್ ಸಿಸೋಡಿಯಾ