Advertisement

ಸಾರಿಗೆ ಸಂಸ್ಥೆ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

10:58 AM Nov 05, 2019 | Team Udayavani |

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಬ್ಬರು ಅಧಿಕಾರಿಗಳು 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ನಗರ ಕೇಂದ್ರ ಬಸ್‌ ನಿಲ್ದಾಣದ 2ನೇ ವಿಭಾಗೀಯ ಕಚೇರಿ ನಿಯಂತ್ರಕ ಶರಣಬಸಪ್ಪ ಭಾವಿಕಟ್ಟಿ ಮತ್ತು ಸಹಾಯಕ ಸಾರಿಗೆ ವ್ಯವಸ್ಥಾಪಕ (ಎಟಿಎಂ) ಜಯವಂತ ಎಸಿಬಿ ಬಲೆಗೆ ಬಿದ್ದವರು.

Advertisement

ಆಳಂದ ಡಿಪೋ ಮ್ಯಾನೇಜರ್‌ ಈಶ್ವರ ಪರಿಟ್‌ ಅವರಿಂದ ಲಂಚ ಸ್ವೀಕರಿಸಿದ್ದರು. ಪ್ರಕರಣವೊಂದರಲ್ಲಿ ಈಶ್ವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದ್ದು, ಇದನ್ನು ಇತರ್ಥ್ಯ ಪಡಿಸಲು ಶರಣಬಸಪ್ಪ ಭಾವಿಕಟ್ಟಿ ಅವರು ಜಯವಂತ ಮೂಲಕ ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಈಶ್ವರ ಅವರಿಂದ ಜಯವಂತ 50 ಸಾವಿರ ರೂ. ಲಂಚ ಸ್ವೀಕರಿಸಿದ್ದರು. ಈ ಲಂಚದ ಹಣವನ್ನು ಸೋಮವಾರ ಸಂಜೆ ಭಾವಿಕಟ್ಟಿ ಅವರಿಗೆ ಜಯವಂತ ನೀಡಲು ಹೋದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಎಸಿಬಿ ಎಸ್‌ಪಿ ವಿ.ಜಿ. ಜ್ಯೋತಿ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುಧಾ ಆದಿ, ಇನ್ಸ್‌ಪೆಕ್ಟರ್‌ಗಳಾದ ಕೃಷ್ಣಪ್ಪ ಕಲ್ಲದೇವರು, ಮಹಮ್ಮದ್‌ ಇಸ್ಮಾಯಿಲ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next