Advertisement

ನಮ್ಮವರಿಬ್ಬರು ಸಿರಿವಂತರು

06:00 AM Jul 13, 2018 | |

ನ್ಯೂಯಾರ್ಕ್‌: ಅಮೆರಿಕದಲ್ಲಿರುವ 60 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಅರಿಸ್ಟಾ ನೆಟ್‌ವರ್ಕ್‌ನ ಸಿಇಒ ಜಯಶ್ರೀ ಉಳ್ಳಾಲ್‌ (57) 18ನೇ ಸ್ಥಾನ ಮತ್ತು  ನೀರಜಾ ಸೇಥಿ (63) 21ನೇ ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ನಿಯತಕಾಲಿಕ ಸ್ವಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಏರಿ ಸಿರಿವಂತರಾದ 60 ಮಂದಿಯ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ 21 ವರ್ಷ ವಯಸ್ಸಿನ ಕೈಲಿ ಜೆನ್ನರ್‌ ಅತ್ಯಂತ ಕಿರಿಯವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಜಯಶ್ರೀ ಉಳ್ಳಾಲ್‌  2008ರಿಂದ ಕಂಪ್ಯೂ ಟರ್‌ ನೆಟ್‌ವರ್ಕ್‌ ಸಂಸ್ಥೆ ಅರಿಸ್ಟಾ ನೆಟ್‌ವರ್ಕ್‌ ನ ಸಿಇಒ ಮತ್ತು ಅಧ್ಯಕ್ಷರಾಗಿದ್ದಾರೆ. ಅವರು ಒಟ್ಟು 1.3 ಶತಕೋಟಿ ಡಾಲರ್‌ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಲಂಡನ್‌ನಲ್ಲಿ ಜನಿಸಿರುವ ಉಳ್ಳಾಲ್‌ ನವದೆಹಲಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಆರಿಸ್ಟಾದ ಶೇ.5ರಷ್ಟು ಸಂಪತ್ತನ್ನು ಉಳ್ಳಾಲ್‌ ಹೊಂದಿದ್ದು, ಅದನ್ನು ತಮ್ಮ ಇಬ್ಬರು ಮಕ್ಕಳು ಮತ್ತು ಸೋದರ ಸೊಸೆ ಮತ್ತು ಸೋದರ ಸಂಬಂಧಿ ಹೆಸರಿಗೆ ಬರೆದಿದ್ದಾರೆ ಎಂದು ಫೋಬ್ಸ್ì ಹೇಳಿದೆ. 

ನೀರಜ ಸೇಥಿ ಸಿಂಟೆಲ್‌ ಎಂಬ ಸಂಸ್ಥೆ ಯನ್ನು 1980ರಲ್ಲಿ ಪತಿ ಭರತ್‌ ದೇಸಾಯಿ ಜತೆಗೂಡಿ ಮಿಚಿಗನ್‌ನಲ್ಲಿ ಆರಂಭಿಸಿದ್ದರು. ಆರಂಭದಲ್ಲಿ ಕೇವಲ 2 ಸಾವಿರ ಡಾಲರ್‌ನಿಂ ದ ಆರಂಭಿಸಿದ್ದ ಕಂಪನಿ 2017ರಲ್ಲಿ 924 ದಶಲಕ್ಷ ಡಾಲರ್‌ ಆದಾಯ ಗಳಿಸಿತ್ತು. ಸಂಸ್ಥೆ ಯ 23 ಸಾವಿರ ಉದ್ಯೋಗಿಗಳ ಪೈಕಿ ಶೇ.80 ರಷ್ಟು ಮಂದಿ ಭಾರತೀಯರೇ.

ಪಟ್ಟಿಯಲ್ಲಿ ಅತ್ಯಂತ ಕಿರಿಯವರೆಂದರೆ ರೂಪದರ್ಶಿ ಕಿಮ್‌ ಕರ್ದಾಶಿಯನ್‌ರ ಮಲ ಸಹೋದರಿ ಕೈಲಿ ಜೆನ್ನರ್‌. ಮುಂದಿನ ತಿಂಗಳು ಅವರು 21ನೇ ವರ್ಷಕ್ಕೆ ಕಾಲಿಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next