ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತ ನೈಜೀರಿಯಾ ಪ್ರಜೆಗಳನ್ನು ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ:ಸುಂಜ್ವಾನ್ ಸೇನಾ ನೆಲೆಯ ಬಳಿ ಮತ್ತೊಂದು ಡ್ರೋನ್ ಪತ್ತೆ: ಮೂರು ದಿನದಲ್ಲಿ ಐದು ಡ್ರೋನ್ ಪತ್ತೆ
ಜೂ.3ರಂದು ಮನಾಫ್, ಮುಝಾಂಬಿಲ್, ಅಹಮ್ಮದ್ ಮಸೂಕ್ ಎಂಬವರನ್ನು ವಶಕ್ಕೆ ಪಡೆದು 170 ಗ್ರಾಂ ಎಂ.ಡಿ.ಎಂ.ಎಂ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಜೂ.13ರಂದು ಉಪ್ಪಳ ನಿವಾಸಿಗಳಾಸ ಶಫೀಕ್ ಕೆ.ಎಸ್. ಮತ್ತು ಅಲ್ತಾಫ್ ರನ್ನು ವಶಕ್ಕೆ ಪಡೆದು 65 ಗ್ರಾಂ ಎಂ.ಡಿ.ಎಂ.ಎಂ ಡ್ರಗ್ಸ್ ವಶಕ್ಕೆ ಪಡೆಲಾಗಿತ್ತು. ವಿಚಾರಣೆ ಸಂದರ್ಭ ತಮಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಟ್ಯಾನ್ಲಿ ಚಿಮಾ ಮತ್ತು ಉಪ್ಪಳದ ರಮೀಜ್ ಬಗ್ಗೆ ಮಾಹಿತಿ ನೀಡಿದ್ದು ಅವರನ್ನು ಬಂಧಿಸಲಾಗಿತ್ತು.
ಸ್ಟ್ಯಾನ್ಲಿ ಮತ್ತು ರಮೀಜ್ ನನ್ನು ವಿಚಾರಣೆ ಮಾಡಿದಾಗ ಬೆಂಗಳೂರಿನಲ್ಲಿರುವ ನೈಜೀರಿಯಾ ಮೂಲದ ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ರಿಂದ ಡ್ರಗ್ಸ್ ಖರೀದಿಸಿದ್ದಾಗಿ ಹೇಳಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಿದ ನಗರ ಪೊಲೀಸರು ಬಿದರಹಳ್ಳಿಯಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.