Advertisement

Ramesh Aravind; ಬರ್ತ್ ಡೇ ಹಿನ್ನೆಲೆಯಲ್ಲಿ ಎರಡು ಹೊಸ ಸಿನಿಮಾ ಘೋಷಣೆ

11:42 AM Sep 11, 2023 | Team Udayavani |

ನಟ ರಮೇಶ್‌ ಅರವಿಂದ್‌ ಅವರಿಗೆ ಭಾನುವಾರ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಹೊಸ ಚಿತ್ರವೊಂದು ಅನೌನ್ಸ್‌ ಆಗಿದೆ. ಅದು “ದೈಜಿ’.

Advertisement

ಹೌದು, ಹೀಗೊಂದು ವಿಭಿನ್ನ ಟೈಟಲ್‌ನ ಸಿನಿಮಾದಲ್ಲಿ ರಮೇಶ್‌ ಅರವಿಂದ್‌ ನಟಿಸುತ್ತಿದ್ದಾರೆ. ಇದು ಅವರ 106ನೇ ಚಿತ್ರ. ಈ ಚಿತ್ರವನ್ನು ಆಕಾಶ್‌ ಶ್ರೀವತ್ಸ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ರಮೇಶ್‌ ಅರವಿಂದ್‌ ಜೊತೆ “ಶಿವಾಜಿ ಸುರತ್ಕಲ್‌’ ಹಾಗೂ “ಶಿವಾಜಿ ಸುರತ್ಕಲ್‌-2′ ಚಿತ್ರಗಳನ್ನು ನಿರ್ದೇಶಿಸಿರುವ ಆಕಾಶ್‌ ಈಗ ಮೂರನೇ ಬಾರಿ ರಮೇಶ್‌ ಅರವಿಂದ್‌ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ.

ಈ ಚಿತ್ರವನ್ನು ವಿಭಾ ಕಶ್ಯಪ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ರವಿ ಕಶ್ಯಪ್‌ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಧನಂಜಯ್‌ ಅವರು ನಟಿಸಿದ “ಬದ್ಮಾಶ್‌’

ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಚಿತ್ರದ ಶೀರ್ಷಿಕೆ “ದೈಜಿ’ ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನಿ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹಾರರ್‌ ಜೊತೆಗೆ ಮಿಸ್ಟರಿ ಅಂಶಗಳೊಂದಿಗೆ ಈ ಚಿತ್ರ ಸಾಗಲಿದೆ ಎಂಬ ಮಾಹಿತಿ ನೀಡುತ್ತದೆ ತಂಡ. ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್‌ ಬರೆದ ಅಭಿಜಿತ್‌ ವೈ ಆರ್‌ ಮತ್ತು ಆಕಾಶ್‌ ಶ್ರೀವತ್ಸರವರು ಸೇರಿ ಬರೆದಿದ್ದಾರೆ.

ಚಿತ್ರೀಕರಣ ಡಿಸೆಂಬರ್‌ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರ ಗೆಟಪ್‌ ಕೂಡಾ ವಿಭಿನ್ನವಾಗಿರಲಿದೆ ಎನ್ನುತ್ತದೆ ಚಿತ್ರತಂಡ.

Advertisement

ವಿಖ್ಯಾತ್‌ ಸಿನಿಮಾದಲ್ಲಿ ನಟನೆ

ನಿರ್ಮಾಪಕ ವಿಖ್ಯಾತ್‌ ಅವರ ಹೊಸ ಚಿತ್ರದಲ್ಲಿ ರಮೇಶ್‌ ಅರವಿಂದ್‌ ನಟಿಸುತ್ತಿದ್ದಾರೆ. ಈ ವಿಚಾರವನ್ನು ಹುಟ್ಟುಹಬ್ಬ ದಿನ ಚಿತ್ರತಂಡ ಅನೌನ್ಸ್‌ ಮಾಡಿದೆ. ಅಂದಹಾಗೆ, ವಿಶೇಷವೆಂದರೆ ಈ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೂಡಾ ನಟಿಸುತ್ತಿದ್ದಾರೆ. ಚಿತ್ರದ ಹೊಸ ಪೋಸ್ಟರ್‌ ಬಿಟ್ಟಿದ್ದು, ಅಲ್ಲಿ ಒಂದಷ್ಟು ಸೈನಿಕರ ಮಧ್ಯೆ ವಿಭಿನ್ನ ಗೆಟಪ್‌ನಲ್ಲಿ ರಮೇಶ್‌ ಹಾಗೂ ಗಣೇಶ್‌ ನಿಂತಿದ್ದಾರೆ. ಈ ಮೂಲಕ ಚಿತ್ರತಂಡ ಹೊಸದೇನೋ ಹೇಳಲು ಹೊರಟಿದೆ. ಅಂದಹಾಗೆ, ಇದು ವಿಖ್ಯಾತ್‌ ಚಿತ್ರ ಸಂಸ್ಥೆಯ 6ನೇ ಚಿತ್ರ. ಈ ಚಿತ್ರವನ್ನು ವಿಖ್ಯಾತ್‌ ಎ.ಆರ್‌. ನಿರ್ದೇಶಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next