Advertisement
ನಗರದ ನಾಗರಿಕರ ಮೂಲ ಸೌಕರ್ಯ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆ್ಯಪ್ ಮೂಲಕ ತಂತ್ರಜ್ಞಾನದ ಸ್ಪರ್ಶವನ್ನು ನೀಡಲು ಪಾಲಿಕೆ ಸಿದ್ಧತೆ ನಡೆಸಿದೆ. ಈ ಕುರಿತಂತೆ ಶಾಸಕರಾದ ವೇದವ್ಯಾಸ್ ಕಾಮತ್, ಡಾ| ಭರತ್ ಶೆಟ್ಟಿ ವೈ. ಅವರು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಕೆಲವೇ ದಿನಗಳಲ್ಲಿ ಪಾಲಿಕೆ ವ್ಯವಹಾರ ಹಾಗೂ ಜನರ ಸಮಸ್ಯೆ ಆಲಿಸಲು ಎರಡು ಆ್ಯಪ್‌ಗ್ಳು ಜನ ಸೇವೆಗೆ ಲಭಿಸಲಿವೆ. ಮೊಬೈಲ್ ಮೂಲಕ ನಿಗದಿತ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಮಸ್ಯೆಯನ್ನು ತಿಳಿಸಬಹುದು.
ಮನಪಾ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವುದೇ ಜನರಿಗೆ ಬಹುದೊಡ್ಡ ಸಮಸ್ಯೆ. ಇದೀಗ ಆ ಸಮಸ್ಯೆ ಪರಿಹಾರಕ್ಕಾಗಿ ಪಾಲಿಕೆ ಆ್ಯಪ್ ಪರಿಚಯಿಸುತ್ತಿದೆ. ಅದರ ಮೂಲಕ ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಪಾಲಿಕೆ ಅಧಿಕಾರಿಗಳಿಗೆ ಸುಲಭವಾಗಿ ತಲುಪಿಸಬಹುದು ಹಾಗೂ ವೇಗವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು. ಆ್ಯಪ್ ಮೂಲಕ ಟ್ರೇಡ್ ಲೈಸನ್ಸ್
ಸಮಸ್ಯೆ ತಿಳಿಸಲು ಒಂದು ಆ್ಯಪ್ ಆದರೆ ಮನಪಾದ ಸವಲತ್ತುಗಳನ್ನು ಪಡೆಯುವುದಕ್ಕೆ ಮತ್ತೂಂದು ಆ್ಯಪ್ ಮಾಡಲು ಪಾಲಿಕೆ ಚಿಂತನೆ ನಡೆಸಿದೆ. ಇದರಲ್ಲಿ ಮೊದಲ ಹಂತದಲ್ಲಿ ಟ್ರೇಡ್ ಲೈಸನ್ಸ್ ಮಾತ್ರ ಪಡೆಯುವ ಅವಕಾಶವಿದ್ದು, ಮುಂದಿನ ಹಂತದಲ್ಲಿ ಇತರ ಸೇವೆಗಳನ್ನು ಪಡೆಯುವಂತೆ ಆ್ಯಪ್ ಮಾರ್ಪಾಡು ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಪಾಲಿಕೆಗೆ ತಿಳಿಸಿದ್ದಾರೆ. ಈ ಎರಡು ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಕೆಲಸಗಳನ್ನು ಸಾರ್ವಜನಿಕರು ಮಾಡಿಕೊಳ್ಳಬಹುದು. ಆ್ಯಪ್ ತಯಾರಿಗೆ ತಾಂತ್ರಿಕ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಇನ್ನು ಕೆಲವೇ ಸಮಯಗಳಲ್ಲಿ ಜನಸಾಮಾನ್ಯರಿಗೆ ಈ ಸೇವೆಗಳು ಲಭಿಸಲಿವೆ.
Related Articles
ನೀರಿನ ಶುಲ್ಕ, ಖಾತಾ ಬದಲಾವಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ ಪಾಲಿಕೆಯಿಂದ 10 ಸೇವೆಗಳನ್ನು ಆನ್‌ಲೈನ್ ಮೂಲಕ ವ್ಯವಹರಿಸಬಹುದು ಎಂಬುದಾಗಿ ಪಾಲಿಕೆ ಈ ಹಿಂದೆ ತಿಳಿಸಿತ್ತು. ಆದರೆ ವರ್ಷ ಕಳೆದರೂ ಆನ್‌ಲೈನ್ ಸೇವೆ ಇನ್ನೂ ಆರಂಭವಾಗಿಲ್ಲ.
Advertisement
ಪ್ರಸ್ತುತ ನೀರಿನ ಬಿಲ್, ಪುರಭವನ ಬಾಡಿಗೆ ಸಹಿತ ಬಹುತೇಕ ಸೇವೆಗಳಿಗಾಗಿ ಜನರು ಪಾಲಿಕೆ ಕಚೇರಿ ಅಥವಾ ಮಂಗಳೂರು ಒನ್‌ಗೆ ತೆರಳಬೇಕಾಗಿದೆ. ಅಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಆನ್‌ಲೈನ್ ಸೇವೆ ಆರಂಭಿಸಲಾಗುವುದು ಎಂಬುದಾಗಿ ಪಾಲಿಕೆ ಹೇಳುತ್ತಾ ಬಂದಿದ್ದರೂ ಈವರೆಗೆ ಆನ್‌ಲೈನ್ ಸೇವೆ ಆರಂಭವಾಗಿಲ್ಲ.
ಬಿಬಿಎಂಪಿ ಆ್ಯಪ್ ಮಂಗಳೂರಿಗೂ ಬರಲಿಬೆಂಗಳೂರಿನ ಬಿಬಿಎಂಪಿಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ “ಸಹಾಯ ಆ್ಯಪ್’ ಇದೆ. ಇದರಲ್ಲಿ ಸಾರ್ವಜನಿಕರು ಘನತ್ಯಾಜ್ಯ ನಿರ್ವಹಣೆ, ರಸ್ತೆ ಅವ್ಯವಸ್ಥೆ ಮುಂತಾದ ಸಮಸ್ಯೆಗಳ ಬಗ್ಗೆ ದೂರು ನೀಡುವ ವ್ಯವಸ್ಥೆ ಇದೆ. ಘನತ್ಯಾಜ್ಯ ನಿರ್ವಹಣೆ ಸಮಸ್ಯೆಯ ಬಗ್ಗೆ ದೂರು ದಾಖಲಾದ 12 ತಾಸುಗಳೊಳಗೆ ಪರಿಹರಿಸಬೇಕು ಎಂಬ ನಿಯಮ ಇದೆ. ಇದರಲ್ಲಿ ಗಣನೀಯ ಪ್ರಮಾಣದಲ್ಲಿ ದೂರುಗಳು ದಾಖಲಾಗುತ್ತಿದ್ದು, ಕಾಲಮಿತಿಯಲ್ಲಿ ಬಗೆಹರಿಸಬೇಕು ಎಂಬ ಕಾರಣಕ್ಕಾಗಿ ಸೂಕ್ತ ಕ್ರಮಗಳನ್ನು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕೈಗೊಳ್ಳುತ್ತಿದೆ. ಇದೇ ರೀತಿಯಲ್ಲಿ ಮನಪಾ ಆ್ಯಪ್ ಕಾರ್ಯಚರಿಸಲಿ ಎಂಬುದು ಸಾರ್ವಜನಿಕರ ಆಗ್ರಹ. ಶೀಘ್ರ ಸೇವೆ ಲಭ್ಯ
ಪಾಲಿಕೆಯ ಸೇವೆಗಳನ್ನು ಜನರಿಗೆ ಆನ್‌ಲೈನ್ ಮೂಲಕ ನೀಡುವ ಸಲುವಾಗಿ ಪಾಲಿಕೆ ಆಯುಕ್ತರು ಹಾಗೂ ಉಪ ಆಯುಕ್ತರು ಹೆಚ್ಚು ಆಸಕ್ತಿ ವಹಿಸಿದ್ದು, ಅವರ ಆಸಕ್ತಿ ಕಂಡು ಜನಪ್ರತಿನಿಧಿಗಳು ಅವರಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದೇವೆ. ಆ್ಯಪ್ ಕೆಲಸಗಳು ನಡೆಯುತ್ತಿವೆ. ಇನ್ನು ಕೆಲವೇ ಸಮಯದಲ್ಲಿ ಜನರ ಬಳಕೆಗೆ ಲಭ್ಯವಾಗಲಿದೆ.
- ವೇದವ್ಯಾಸ್ ಕಾಮತ್, ಶಾಸಕರು ಯೋಜನೆ ರೂಪಿಸಲಾಗುತ್ತಿದೆ
ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಲು ನೆರವಾಗುವ ದೃಷ್ಟಿಯಿಂದ ಹೊಸ ಎರಡು ಆ್ಯಪ್‌ಗ್ಳನ್ನು ಪರಿಚಯಿಸಲು ಪಾಲಿಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಇದರ ನಿಖರ ಚಿತ್ರಣ ಲಭಿಸಲಿದೆ.
- ಸಂತೋಷ್, ಉಪ ಆಯುಕ್ತರು(ಆಡಳಿತ)
– ಪ್ರಜ್ಞಾ ಶೆಟ್ಟಿ