Advertisement
ಏನಿದರ ಪ್ರಭೇದಗಳ ವಿಶೇಷ? ಇವು ಅಪಾರ ಸಂಖ್ಯೆಯಲ್ಲಿ ಜೀವಿಸುವಂಥವಲ್ಲ. ಒಂದು ಸಣ್ಣ ಗೂಡಿನಲ್ಲಿ ಸುಮಾರು 30ರಿಂದ 150 ಮಾತ್ರ ಒಟ್ಟಿಗೆ ಇರುವಂಥವು. ಇವುಗಳ ಮೈಬಣ್ಣ ಹಳದಿ. ಕಾಲುಗಳ ಅಂಚು ಕಪ್ಪು ಮಿಶ್ರಿತ ಹಳದಿ ಬಣ್ಣದ್ದಾಗಿರುತ್ತದೆ. ಸಮುದ್ರ ಮಟ್ಟದಿಂದ ಸುಮಾರು 1,600ಕ್ಕಿಂತಲೂ ಹೆಚ್ಚು ಎತ್ತರದ ಪ್ರದೇಶಗಳಲ್ಲಿ ಹಾಗೂ ಸದಾ ನೆರಳು ಇರುವ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ ಎಂದು ಎಟಿಆರ್‌ಇಇ ತಜ್ಞ ಕಮಲ್‌ಜಿತ್ ಎಸ್ ಬಾವಾ ತಿಳಿಸಿದ್ದಾರೆ.
ಸಾಮಾನ್ಯವಾಗಿ, ಈ ಪ್ರಭೇದಗಳು ಉತ್ತರ ಅಮೆರಿಕ, ಯೂರೋಪ್, ಉತ್ತರ ಆಫ್ರಿಕಾ, ಕೊರಿಯಾ, ಜಪಾನ್ ಹಾಗೂ ಆಸ್ಟ್ರೇಲಿಯಾದಲ್ಲಿ ಮಾತ್ರ ಕಂಡುಬರುತ್ತಿದ್ದವು. ಭಾರತದಲ್ಲಿ ಈ ಪ್ರಭೇದಗಳು ಪತ್ತೆಯಾಗಿರುವುದು ಇದೇ ಮೊದಲು.