Advertisement

ಹರ್ಯಾಣದಲ್ಲಿ ಕಾರು ಹೊತ್ತಿ ಉರಿದು ಇಬ್ಬರು ಮುಸ್ಲಿಂ ಯುವಕರ ಸಾವು:ಗೋ ಸಾಗಾಟ, ಕೊಲೆ ಶಂಕೆ

10:39 AM Feb 17, 2023 | Team Udayavani |

ಭರತ್‌ಪುರ್‌: ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಬೆಂಕಿಯ ಕೆನ್ನಾಲಿಗೆಯಿಂದಾಗಿ ಹೊತ್ತಿ ಉರಿದ ಕಾರಿನಲ್ಲಿ ಇಬ್ಬರು ಮುಸ್ಲಿಂ ಯುವಕರ ಶವ ಪತ್ತೆಯಾದ ಒಂದು ದಿನದ ಬಳಿಕ ಇದೀಗ ಪೋಲಿಸರು 5 ಮಂದಿ ಮೇಲೆ ಪ್ರಕರಣ ದಾಖಲಾಗಿದೆ. ಇಬ್ಬರೂ ಮುಸ್ಲಿಂ ಯುವಕರನ್ನು ರಾಜಸ್ಥಾನದ ಭರತ್‌ಪುರ್‌ ಜಿಲ್ಲೆಯಿಂದ ಅಪಹರಿಸಿ ಹರ್ಯಾಣದಲ್ಲಿ ಕೊಲೆಗೈಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಗೋವಿನ ಕಳ್ಳ ಸಾಗಾಣಿಕೆಯ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತರನ್ನು ನಾಸಿರ್‌ ಮತ್ತು ಜುನೈದ್‌ ಎಂದು ಗುರುತಿಸಲಾಗಿದೆ. ಅಲ್ಲದೆ ಪ್ರಕರಣ ಸಂಬಂಧ 5 ಮಂದಿ ಗೋರಕ್ಷಕರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ.

Advertisement

ಕಳೆದ ದಿನ ನಾಸಿರ್‌ ಮತ್ತು ಜುನೈದ್‌ ಅವರ ಮೃತದೇಹ ಮಹೇಂದ್ರಾ ಬೊಲೆರೋ ಕಾರಿನಲ್ಲಿ ಹೊತ್ತಿ ಉರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದ ಪೋಲಿಸರು ಈಗ  5 ಮಂದಿಯನ್ನು ಬಂಧಿಸಿದ್ದಾರೆ.

ಕಾರು ತಾನಾಗಿಯೇ ಹೊತ್ತಿಕೊಂಡಿತೇ ಅಲ್ಲಾ ಬೆಂಕಿಯಿಟ್ಟಿದ್ದಾರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ ಗೋರಕ್ಷಕರೂ ಇದರಲ್ಲಿ ಭಾಗಿಯಾಗಿರುವ ಸಂದೇಹವಿದ್ದು ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಜುನೈದ್‌ ಮೇಲೆ 5 ಗೋ ಕಳ್ಳತನದ ಪ್ರಕರಣವಿದ್ದು, ನಾಸಿರ್‌ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು    ಸ್ಥಳಿಯ ಪೋಲಿಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಕರಣದ ಸಂಬಂಧ ಭಜರಂಗದಳದ 5 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಎಲ್ಲರೂ ಗೋ ರಕ್ಷಕರೆಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next