Advertisement
ಬಹು ಸವಾಲಿನ ಮಧ್ಯೆ ಮೀನುಗಾರಿಕೆ ಪೂರ್ಣಗೊಳಿಸಿ ದಡಕ್ಕೆ ಬಂದ ಮೀನುಗಾರರಿಗೆ 2 ತಿಂಗಳು ರಜೆ. ಈ ವೇಳೆ ಮೀನುಗಾರರು ಬೋಟ್ ರಿಪೇರಿ, ಬಲೆ ನೇಯುವುದು ಮತ್ತಿತರ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.
Related Articles
Advertisement
ಅಂದಾಜಿನ ಪ್ರಕಾರ ದ.ಕ. ಜಿಲ್ಲೆಯಲ್ಲಿ ಸುಮಾರು 70 ಜೋಡಿ ನಾಡದೋಣಿಗಳಿವೆ. ಒಂದೊಂದು ಜೋಡಿಯಲ್ಲಿ ಸರಿಸುಮಾರು 4ರಿಂದ 5 ದೋಣಿಗಳಿರುತ್ತವೆ. ಒಂದು ಜೋಡಿಯಲ್ಲಿ ಸುಮಾರು 50ರಿಂದ 60 ಮೀನುಗಾರರಿರುತ್ತಾರೆ. ಒಂದೊಂದು ಜೋಡಿ 6ರಿಂದ 8 ಲಕ್ಷ ರೂ.ವರೆಗೆ ಸರಾಸರಿ ಮೀನುಗಾರಿಕೆ ನಡೆಸಿದ್ದೂ ಇದೆ.
ದಡಕ್ಕೆ ಬಂದ ಬೋಟ್‌ಗೆ ಜಾಗವಿಲ್ಲ!ಮೀನುಗಾರಿಕೆಗೆ ತೆರಳಿ ವಾಪಸಾದ ಬೋಟ್‌ಗಳಿಗೆ ಮಂಗಳೂರಿನ ದಕ್ಕೆಯಲ್ಲಿ ನಿಲುಗಡೆಗೆ ಜಾಗವಿಲ್ಲದ ದೂರು ಈ ಬಾರಿಯೂ ಕೇಳಿಬಂದಿದೆ. ಇಲ್ಲಿ ಮೋಟರೀಕೃತ ನಾಡದೋಣಿ, ಯಾಂತ್ರೀಕೃತ ದೋಣಿ ಸೇರಿದಂತೆ ಸುಮಾರು 2000ಕ್ಕೂ ಅಧಿಕ ಇವೆ. ಈಗ ಇರುವ ಮಂಗಳೂರು ದಕ್ಕೆ 600 ಮೀಟರ್ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಕ್ರಮಪ್ರಕಾರವಾಗಿ ಹೆಚ್ಚಾ ಕಡಿಮೆ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶ. ಉಳಿದಂತೆ ಎಲ್ಲ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಒಂದೊಂದು ಬೋಟುಗಳನ್ನು ತಾಗಿಸಿ ಇಟ್ಟಿರುವ ಪರಿಣಾಮ ಬೋಟ್‌ಗಳಿಗೆ ಹಾನಿಯಾಗುತ್ತಿವೆ. ಲಕ್ಷಾಂತರ ರೂ. ನಷ್ಟವಾಗುತ್ತಿವೆ. 61 ದಿನಗಳ ನಿಷೇಧ ಆರಂಭ
ಯಾವುದೇ ಬಲೆಗಳನ್ನು ಅಥವಾ ಸಾಧನಗಳನ್ನು ಉಪಯೋಗಿಸಿ ಎಲ್ಲ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ, ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂ. 1ರಿಂದ ಜುಲೈ 31ರ ವರೆಗೆ ಸೇರಿ ಒಟ್ಟು 61 ದಿನಗಳು ನಿಷೇಧಿಸಲಾಗಿದೆ. ಆದರೆ ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟಾರೀಕೃತ ಎಂಜಿನ್ ಹಾಗೂ ಸಾಂಪ್ರದಾಯಿಕ ಮತ್ತು ನಾಡದೋಣಿಗಳಲ್ಲಿ ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
– ಹರೀಶ್ ಕುಮಾರ್, ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ ದ.ಕ. -ದಿನೇಶ್ ಇರಾ