Advertisement

ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತೆರಡು ಅಕ್ರಮ: ಬಿಜೆಪಿ ಆರೋಪ 

08:15 AM Feb 24, 2018 | Team Udayavani |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತೆರಡು ಹಗರಣಗಳ ಬಗ್ಗೆ ಬಿಜೆಪಿ ಆರೋಪ ಮಾಡಿದೆ. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ತಮ್ಮ ಸ್ವಕ್ಷೇತ್ರ ಹೊಳಲ್ಕೆರೆಯಲ್ಲಿ ಗಂಗಾ ಕಲ್ಯಾಣ
ಯೋಜನೆಯಡಿ 1,800 ಕೊಳವೆ ಬಾವಿಗಳನ್ನು ಕೊರೆಸಿ ಕೋಟ್ಯಂತರ ರೂ. ಅಕ್ರಮ ಎಸಗಿದ್ದಾರೆ ಎಂಬುದು ಒಂದು ಆರೋಪವಾದರೆ, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 2,533.13 ಕೋಟಿ ರೂ. ಮೊತ್ತದ ಟೆಂಡರ್‌
ನಲ್ಲಿಯೂ ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿ ಭಾರೀ ಅವ್ಯವಹಾರ ಎಸಗಲಾಗಿದೆ ಎಂಬುದು ಮತ್ತೂಂದು ಆರೋಪ.

Advertisement

ಬೆಂಗಳೂರಿನಲ್ಲಿ ಶುಕ್ರವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಈ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ಈ ಅಕ್ರಮಗಳಿಗೆ ಸಂಬಂಧಿಸಿದಂತೆ ಸಚಿವ ಎಚ್‌.ಆಂಜನೇಯ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ. ಗಂಗಾ ಕಲ್ಯಾಣದಲ್ಲಿ ಅವ್ಯವಹಾರ: ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಜ.22ರಂದು ಡಾ.ಅಂಬೇಡ್ಕರ್‌ ಅಭಿವೃದಿಟಛಿ ನಿಗಮದ ಸಭೆಯಲ್ಲಿ ರಾಜ್ಯದ 7 ವಿಭಾಗಗಳಲ್ಲಿ 34 ಸಾವಿರ ಕೊಳವೆಬಾವಿ ಕೊರೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ಸಚಿವ ಆಂಜನೇಯ ಪ್ರತಿನಿಧಿಸುವ ಹೊಳಲ್ಕೆರೆ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ದಿನದಲ್ಲಿ 1800 ಕೊಳವೆ ಬಾವಿ ಕೊರೆಯಲು ಆದೇಶ ನೀಡಿ 18 ಕೋಟಿ ರೂ. ಮಂಜೂರು 
ಮಾಡಲಾಗಿದೆ. ಕೊಳವೆಬಾವಿ ಕೊರೆಯಲು ಗುತ್ತಿಗೆದಾರರನ್ನೂ ನೇಮಿಸಲಾಗಿದೆ. ಆದರೆ, ಕೊಳವೆಬಾವಿ ಮಂಜೂರಾದ ಫ‌ಲಾನುಭವಿಗಳ ಮಾಹಿತಿ ಇಲ್ಲ. ಟೆಂಡರ್‌ ಕರೆಯದೆ ಕೊಳವೆ ಬಾವಿ ಕೊರೆಯಲು ಆದೇಶ ನೀಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಕಾಯ್ದೆ ಪ್ರಕಾರ ಒಂದೇ ಪ್ರದೇಶದಲ್ಲಿ ಇಷ್ಟೊಂದು ಕೊಳವೆ ಬಾವಿ ಕೊರೆಯಲು ಅವಕಾಶ ಇಲ್ಲ. ಆದರೂ ಕೊಳವೆಬಾವಿ
ಕೊರೆಯಲಾಗಿದೆ ಎಂದು ಹೇಳಿ ಹಣ ಮಂಜೂರು ಮಾಡಲಾಗಿದೆ. ಈ ಪ್ರಕರಣದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಅಕ್ರಮ: ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧೀಕ್ಷಕ
ಎಂಜಿನಿಯರ್‌ ಸಣ್ಣ ಚಿತ್ರಯ್ಯ ಎಂಬುವರು ಕೇವಲ 3-4 ತಿಂಗಳ ಅವಧಿಯಲ್ಲಿ ಪಾರದರ್ಶಕ ಕಾಯ್ದೆಯನ್ನು ಸಂಪೂರ್ಣ ಉಲ್ಲಂ ಸಿ 2553.13 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಕರೆದಿದ್ದಾರೆ. ಈ ಸಂದರ್ಭದಲ್ಲಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ಟೆಂಡರ್‌ ಷರತ್ತುಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು. 

ಈ ಹಗರಣದಲ್ಲಿ ಶೇ.15 ಕಮಿಷನ್‌ ದಂಧೆ ನಡೆದಿದ್ದು, ಇದರಲ್ಲಿ ಸಚಿವ ಆಂಜನೇಯ ಪಾಲೆಷ್ಟು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲೆಷ್ಟು ಎಂದು ಪ್ರಶ್ನಿಸಿದ ಜಗದೀಶ್‌ ಶೆಟ್ಟರ್‌, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಟೆಂಡರ್‌ನಲ್ಲಿ ಭಾಗವಹಿಸಿದವರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಟೆಂಡರ್‌ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಆರೋಪ ಸತ್ಯಕ್ಕೆ ದೂರವಾದದ್ದು ಶೋಭಾ ಕರಂದ್ಲಾಜೆ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಮಂತ್ರಿ ಆಗಿರುವುದರಿಂದ ಹೊಳಲ್ಕೆರೆ ಮೀಸಲು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ… ನೀಡಿದ್ದೇನೆ. ಅಲ್ಲಿ ಬಡತನ ಹೆಚ್ಚಿದೆ ಅದಕ್ಕೆ ಕೆಲಸ ಮಾಡುತ್ತೇನೆ. ಜನಪರ
ಕೆಲಸ ಮಾಡಿದರೆ, ಭ್ರಷ್ಟಾಚಾರ ಆರೋಪ ಹೊರಿಸುತ್ತಾರೆ. ಒಂದು ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚು ಬೋರ್‌ವೆಲ… ಯಾಕೆ ಕೊರೆಯಲು
ಸಾಧ್ಯವಿಲ್ಲ? ಎಲ್ಲಾ ಕಡೆಯೂ ನೀರು ಬಿದ್ದಿದೆ. ಅಂತರ್ಜಲ ಇರುವುದರಿಂದ ಕೊರೆಯುತ್ತಿದ್ದೇವೆ. ಒಂದು ತಿಂಗಳಿಂದಲೂ
ಕೊರೆಯಲಾಗುತ್ತಿದೆ. ಶೋಭಾ ಕರಂದ್ಲಾಜೆ ಯಾವ ತನಿಖೆಯನ್ನಾದರೂ ಮಾಡಿಕೊಳ್ಳಲಿ. ಆ ಯಮ್ಮ ಮೊದು ಶ್ರೀಮಂತರಿರಲಿಲ್ಲ. 
ಈಗ ಶ್ರೀಮಂತರಾಗಿ ಬಡವರ ವಿರುದ್ಧ ಮಾತಾಡ್ತಿದ್ದಾರೆ ಎಂದು ಸಚಿವ ಆಂಜನೇಯ ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next