ತುಮಕೂರು: ಜಿಲ್ಲೆಯಲ್ಲಿ ಮತ್ತೆ ಭಾನುವಾರ ಇಬ್ಬರಿಗೆ ಕೋವಿಡ್ 19 ಸೋಂಕು ಹರಡಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಕಲ್ಪತರು ನಾಡಿಗೆ ಹೊರ ರಾಜ್ಯದಿಂದ ಬಂದವರೇ ಕಂಟಕವಾಗಿದ್ದಾರೆ. ಗುಜರಾತ್ ನಿಂದ ಮೇ.5 ರಂದು ಪಾವಗಡಕ್ಕೆ ಬಂದಿದ್ದ 13 ಜನರ ಪೈಕಿ 3 ವರಿಗೆ ಸೋಂಕು ತಗಲಿತ್ತು ಈಗ ಮತ್ತೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ತಿಪಟೂರಿನ ಗಾಧಿನಗರದಲ್ಲಿ ಮುಂಬೈ ಗೆ ಹೋಗಿಬಂದವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದರು. ಈ ಇಬ್ಬರನ್ನು ತುಮಕೂರು ಜಿಲ್ಲಾ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
1688ರ ಸಂಪರ್ಕದಲ್ಲಿ ಇದ್ದ 5 ಜನರನ್ನು ಮತ್ತು ಆ 1685 ವ್ಯಕ್ತಿಯ ಸಂಪರ್ಕದಲ್ಲಿ ಇದ್ದ 35 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.
ಜಿಲ್ಲೆಗೆ ಹೊರರಾಜ್ಯ ದಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಜನರು ಜಾಗೃತಿಯಿಂದ ಇರಬೇಕು. ಬೇರೆ ಭಾಗದಿಂದ ಬಂದವರ ಬಗ್ಗೆ ಜಿಲ್ಲಾಡಳಿತ ಕ್ಕೆ ಮಾಹಿತಿ ನೀಡಿ ರೋಗಹರಡದಂತೆ ಸಹಕರಿಸಿ ಎಂದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26 ಕ್ಕೆ ಏರಿಕೆಯಾಗಿದ್ದು ಇನ್ನೂ ಏರಿಕೆ ಯಾಗುವ ಸಾಧ್ಯತೆ ಇದ್ದು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.