ಬೀದರ್: ಗಡಿ ಜಿಲ್ಲೆ ಬೀದರನಲ್ಲಿ ಕೋವಿಡ್-19 ಸೋಂಕಿನ ಆರ್ಭಟ ಮುಂದುವರೆದಿದ್ದು ಮಂಗಳವಾರ ಮತ್ತೆ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 30ಕ್ಕೆ ಏರಿಕೆಯಾಗಿದೆ.
ಸೋಮವಾರವಷ್ಟೇ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಈಗ ಮಂಗಳವಾರ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಧ್ಯಾಹ್ನದ ಹೆಲ್ತ್ ಬುಲೇಟಿನ್ ನಲ್ಲಿ ಹೊಸ 2 ಪ್ರಕರಣಗಳು ದೃಢಪಡಿಸಿದೆ.
23 ವರ್ಷದ 891 ಸಂಖ್ಯೆಯ ರೋಗಿ ಮತ್ತು 30 ವರ್ಷದ 892 ಸಂಖ್ಯೆಯ ರೋಗಿಯಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಡಿಸಿದೆ. ಈ ಇಬ್ಬರು ಸೋಂಕಿತರು ಕಂಟೈನ್ಮೆಂಟ್ ಝೋನ್ ಆಗಿರುವ ಓಲ್ಡ್ ಸಿಟಿಯ ಸಂಪರ್ಕಕ್ಕೆ ಬಂದಿದ್ದರು.
ಬೀದರ ಜಿಲ್ಲೆಯಲ್ಲಿ ಈಗ ಒಟ್ಟಾರೆ ಪಾಸಿಟಿವ್ ಸಂಖ್ಯೆ 30 ಆಗಿದ್ದು, ಅದರಲ್ಲಿ 14 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 15 ಸಕ್ರೀಯ ಪ್ರಕರಣಗಳಾಗಿವೆ.
ರಾಜ್ಯದಲ್ಲಿ ಇಂದು 42 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದಿರಿಂದ ರಾಜ್ಯದಲ್ಲಿ ಒಟ್ಟು 904 ಪ್ರಕರಣಗಳು ದೃಢವಾಗಿದೆ. ಇದುವರೆಗೆ ಸೋಂಕಿನ ಕಾರಣದಿಂದ 31 ಜನರು ಸಾವನ್ನಪ್ಪಿದ್ದು, 426 ಜನರು ಗುಣಮುಖರಾಗಿದ್ದಾರೆ. ಓರ್ವ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ