Advertisement

ಬೀದರ್ ನಲ್ಲಿ ಮತ್ತೆರಡು ಕೋವಿಡ್-19 ಪ್ರಕರಣ ದೃಢ: ದಿಲ್ಲಿಯಿಂದ ಬಂದವರ ಸಂಬಂಧಿಕರಿಗೆ ಸೋಂಕು

09:08 AM Apr 14, 2020 | keerthan |

ಬೀದರ್: ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್-19 ಪ್ರಕರಣಗಳು ದೃಢವಾಗಿದ್ದು,  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ  ಏರಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿಕೆ ನೀಡಿದ್ದಾರೆ.

Advertisement

ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರಿಗೆ ಸೋಂಕು ಪತ್ತೆಯಾಗಿದ್ದು, ಇವರು ದೆಹಲಿಯ ಜಮಾತ್ ಗೆ ಹೊಗಿ ಬಂದ  ಸಂಬಂಧಿಕರಾಗಿದ್ದಾರೆ.

ದೆಹಲಿಗೆ ಹೋಗಿ ಬಂದವರು ನೇರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ. ಸರ್ಕಾರ ಎಲ್ಲಾ ಸವಲತ್ತು ನೀಡುತ್ತಿದೆ. ಜನರಲ್ಲಿ‌ ಮುಸ್ಲಿಂ ಜನರ ಮೇಲೆ‌ ಸಂಶಯ ಬರುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರು ಸರಿಯಾಗಿ ಪತ್ತೆ ಹಚ್ಚಲು ಆಗುತ್ತಿಲ್ಲಾ. ಮುಸ್ಲಿಂ ಬಾಂಧವರು ಸಹಕರಿಸಬೇಕು ಎಂದು ಸಚಿವ ಪ್ರಭು ಚವ್ಹಾಣ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next