ಭೋಪಾಲ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಮತ್ತೆರಡು ಚೀತಾಗಳನ್ನು ಕಾಡಿಗೆ ಬಿಡಲಾಗಿದ್ದು, ಆ ಮೂಲಕ ಅರಣ್ಯಕ್ಕೆ ಬಿಡುಗಡೆಯಾದ ಚೀತಾಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಈ ಪೈಕಿ 7 ಗಂಡು ಮತ್ತು 5 ಹೆಣ್ಣು ಚೀತಾಗಳನ್ನು ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಜೈವಿಕ ಉದ್ಯಾನ (ಕೆಎನ್‌ಪಿ)ಕ್ಕೆ ತರಲಾಗಿತ್ತು.
ಜುಲೈ 10 ರಂದು ಕೆಎನ್‌ಪಿಯಲ್ಲಿ ಪ್ರಭಾಷ್ ಮತ್ತು ಪಾವಕ್ ಎಂಬ ಎರಡು ಗಂಡು ಚಿರತೆಗಳನ್ನು ಕಾಡಿಗೆ ಬಿಡಲಾಯಿತು.
ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ 8 ನಮೀಬಿಯಾ ಚಿರತೆಗಳನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು ಎಂದು ಶಿಯೋಪುರದ ವಿಭಾಗೀಯ ಅರಣ್ಯಾಧಿಕಾರಿ ಪಿ ಕೆ ವರ್ಮಾ ತಿಳಿಸಿದ್ದಾರೆ.
ಚಿರತೆ ಜ್ವಾಲಾ ಈ ವರ್ಷದ ಮಾರ್ಚ್‌ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಪೈಕಿ ಮೂರು ಮರಿಗಳು ಸೇರಿದಂತೆ ಆರು ಚಿರತೆಗಳು ಮಾರ್ಚ್‌ನಿಂದ ಕೆಎನ್‌ಪಿಯಲ್ಲಿ ಸಾವನ್ನಪ್ಪಿವೆ.