ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಕುರಿತಾದ ತನಿಖೆಯನ್ನು ಸಿಐಡಿ ತಂಡದವರು ಮತ್ತಿಷ್ಟು ತೀವ್ರಗೊಳಿಸಿದ್ದು, ಶುಕ್ರವಾರ ಮತ್ತಿಬ್ಬರನ್ನು ಬಂಧಿಸಿದ್ದಾರೆ.
ಕಲಬುರಗಿ ನಗರದ ಜ್ಞಾನ ಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಮತ್ತೊಬ್ಬ ಅಭ್ಯರ್ಥಿಯ ಬಂಧನವಾಗಿದೆ.
ಅಕ್ರಮಕ್ಕೆ ಸಂಬಂಧಿಸಿದಂತೆ ವೀರೇಶ ಶಿರೂರ ಎನ್ನುವ ಅಭ್ಯರ್ಥಿಯನ್ನು ಹಾಗೂ ಆರೋಪಿ ಹಯ್ಯಾಳಿಗೆ ಸಹಕರಿಸಿದ ಆರೋಪದ ಮೇಲೆ ಅಫಜಲಪೂರ ಮೂಲದ ಶರಣಬಸಪ್ಪ ಎಂಬಾತನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಪೊಲೀಸ್ ಕೆಲಸ ಮಾಡಿದ್ದೇನೆ, ಗೃಹಖಾತೆ ಕೊಟ್ಟರೆ ನಿಭಾಯಿಸುವೆ: ಬಿ.ಸಿ.ಪಾಟೀಲ್
ಬ್ಲೂಟೂತ್ ಆಧಾರ: ಈ ಮುಂಚೆ ಒಎಂಆರ್ ಶೀಟ್ ತಿದ್ದುಪಡಿಯಲ್ಲಿ ಬಂಧನವಾದರೆ ಈಗ ಬ್ಯೂಟೂತ್ ಆಧಾರದ ಮೇಲೆ ಬಂಧನ ಕಾರ್ಯಾಚರಣೆ ನಡೆದಿದೆ.