Advertisement

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಇಬ್ಬರಿಗೆ ಶಿಕ್ಷೆ

12:50 PM Apr 07, 2018 | Team Udayavani |

ಹುಣಸೂರು: ಪಕ್ಕದ ಜಮೀನಿನವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಅಪ್ಪ ಮತ್ತು ಇಬ್ಬರು ಮಕ್ಕಳಿಗೆ ಜಿಲ್ಲಾ 8ನೇ ಹೆಚ್ಚುವರಿ ನ್ಯಾಯಾಲಯ 5 ವರ್ಷ ಜೈಲು, 50 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಕಗ್ಗಂಡಿ ಗ್ರಾಮದ ರಾಜೇಗೌಡ, ಪುತ್ರರಾದ ಹರೀಶ್‌, ಸ್ವಾಮಿಗೌಡ ಶಿಕ್ಷೆಗೊಳಗಾದವರು. 2011ರ ಆಗಸ್ಟ್‌ ನಲ್ಲಿ ತಂಬಾಕು ಬೇಸಾಯದ ವೇಳೆ ಪಕ್ಕದ ಜಮೀನಿನ ರಾಮೇಗೌಡ ಮತ್ತವರ ಇಬ್ಬರು ಮಕ್ಕಳ ಮೇಲೆ ಶಿಕ್ಷೆಗೊಳಗಾದ ರಾಜೇಗೌಡ, ಪುತ್ರರಾದ ಹರೀಶ್‌, ಸ್ವಾಮಿಗೌಡ ಸೇರಿಕೊಂಡು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆದು ಹಲ್ಲೆ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೂ ನ್ಯಾಯಾಧೀಶರಾದ ಬಿ.ಎಸ್‌.ಜಯಶ್ರೀ ತಲಾ ಐದು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದು,

ಗಾಯಾಳುವಿಗೆ ದಂಡದ ಹಣ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರಿ ಅಭಿಯೋಜಕಿ ಮಂಜುಳಾ ವಾದ ಮಂಡಿಸಿದ್ದರು. ಗಾಯಗೊಂಡಿದ್ದ ರಾಮೇಗೌಡ, ಪುತ್ರ ತಿಮ್ಮೇಗೌಡ ಕಳೆದ 6 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕಸ್ಟ$rಡಿಗೆ ಕಳುಹಿಸಿದ್ದಾರೆ.

ದರೋಡೆ ಕೋರರಿಗೆ 5 ವರ್ಷ ಜೈಲು: ಬ್ಯಾಂಕ್‌ ಅಧಿಕಾರಿಯನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ 8 ಮಂದಿ ಆರೋಪಿಗಳಿಗೆ  ಹುಣಸೂರಿನ 8ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪಿತ್ತಿದೆ.

Advertisement

ಕೇರಳಾ ರಾಜ್ಯದ ವೈನಾಡು ನಿವಾಸಿಗಳಾದ ಜೋಸೆಫ್ ಕ್ರಿಸ್ಟಿ, ಶ್ರೀಕುಮಾರ್‌, ಕೊಡಗು ಜಿಲ್ಲೆಯ ಕುಶಾಲನಗರದ ಕಿರಣ್‌ ಮತ್ತು ಮಹಮದ್‌ ಅರಾಪತ್‌, ಪಿರಿಯಾಪಟ್ಟಣ ಚನ್ನಪ್ಪ ಹಾಗೂ ವಿಠಲ, ಹುಣಸೂರು ನಗರದ ಕಲ್ಕುಣಿಕೆ ನಿವಾಸಿ ಕೃಷ್ಣ ಜೈಲು ಶಿಕ್ಷೆಗೊಳಗಾದವರು. ಮತ್ತೂರ್ವ ಪ್ರಮುಖ ಆರೋಪಿ ಈವರೆಗೂ ಪತ್ತೆಯಾಗಿಲ್ಲ.

2012 ಆಗಸ್ಟ್‌ನಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ$ಟಿಬೇಟಿಯನ್‌ ನಿರಾಶ್ರಿತ ಕೇಂದ್ರದಲ್ಲಿರುವ ಕಾರ್ಪೊರೇಷನ್‌ ಬ್ಯಾಂಕ್‌ನ ವ್ಯವಸ್ಥಾಪಕ ಗಿರೀಶ್‌ ಬೈಕಿನಲ್ಲಿ ಕುಶಾಲನಗರಕ್ಕೆ ಕರ್ತವ್ಯದ ಮೇಲೆ ತೆರಳುತ್ತಿದ್ದಾಗ ಆರೋಪಿಗಳು ಅವರನ್ನು ಅಡ್ಡಗಟ್ಟಿ ಹಣ ದರೋಡೆಗೆ ಯತ್ನಿಸಿದ್ದರು.

ಆ ವೇಳೆ ಗಿರೀಶ್‌ ಜೋರಾಗಿ ಕೂಗಿಕೊಂಡಿದ್ದರಿಂದ ಹತ್ತಿರದಲ್ಲಿದ್ದ ಪೋಲೀಸರು ಅವರನ್ನು ರಕ್ಷಿಸಿ, 8 ಮಂದಿ ಆರೋಪಿಗಳ ಪೈಕಿ 7 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ವಿಚಾರಣೆಯಲ್ಲಿ ಆರೋಪಿಗಳ ಕೃತ್ಯ ಸಾಬೀತಾಗಿದ್ದರ ಹಿನ್ನೆಲೆಯಲ್ಲಿ ಎಲ್ಲಾ ಆಪಾದಿತರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಬಿ.ಎಸ್‌.ಜಯಶ್ರೀಯವರು ತೀರ್ಪಿತ್ತರು.

ಆರೋಪಿಗಳನ್ನು ಪೊಲೀಸರು ಸ್ಥಳದಲ್ಲೇ ಕಸ್ಟಡಿಗೆ ಪಡೆದು ಜೈಲಿಗೆ ಕಳುಹಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಮಂಜುಳಾ ವಾದಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next