ನವದೆಹಲಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಹತ್ಯೆ ಪ್ರಕರಣ ಮಾಸುವ ಮುನ್ನವೇ ದೆಹಲಿಯಲ್ಲಿ ವೈದ್ಯರೊಬ್ಬರ ಹತ್ಯೆಯಾಗಿದೆ ಇದರಿಂದ ಮತ್ತೆ ಆಸ್ಪತ್ರೆಯಲ್ಲಿ ವೈದ್ಯರಿಗೆ ಸುರಕ್ಷತೆ ಇಲ್ಲ ಎಂಬುದು ಮತ್ತೆ ಸಾಬೀತಾದಂತಾಗಿದೆ.
ದೆಹಲಿಯ ಜೈತ್‌ಪುರ ಪ್ರದೇಶದಲ್ಲಿ ಬುಧವಾರ ಸಂಜೆ ಇಬ್ಬರು ಅಪರಿಚಿತರು ಕಾಲಿಗೆ ಗಾಯವಾಗಿದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ ಈ ವೇಳೆ ಆಸ್ಪತ್ರೆ ಸಿಬಂದಿ ರೋಗಿಗಳಿಗೆ ಉಪಚರಿಸಿದ್ದಾರೆ ಇದಾದ ಬಳಿಕ ಇಬ್ಬರು ವೈದ್ಯರನ್ನು ಕಾಣಬೇಕು ಎಂದು ಹೇಳಿದ್ದಾರೆ ಅದರಂತೆ ವೈದ್ಯರ ಬಳಿಗೆ ಇಬ್ಬರು ರೋಗಿಗಳನ್ನು ಆಸ್ಪತ್ರೆ ಸಿಬಂದಿ ಕಳುಹಿಸಿಕೊಟ್ಟಿದ್ದಾರೆ ಈ ವೇಳೆ ವೈದ್ಯರ ಕೊಠಡಿ ಒಳಗೆ ಪ್ರವೇಶಿಸುತ್ತಿದ್ದಂತೆ ವೈದ್ಯನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಡಾ ಜಾವೇದ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವೈದ್ಯ.
ನಿಮಾ ಆಸ್ಪತ್ರೆಯಳ್ಳಿ ಈ ಘಟನೆ ನಡೆದಿದ್ದು ಸಿಬ್ಬಂದಿಯಾ ಮಾಹಿತಿ ಪ್ರಕಾರ ಇಬ್ಬರು ರೋಗಿಗಳು ಕಾಲಿಗೆ ಗಾಯವಾಗಿದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದರು ಅದರಂತೆ ಅವರ ಕಾಲಿಗೆ ಔಷಧಿ ಹಾಕಿ ಚಿಕಿತ್ಸೆ ನೀಡಲಾಗಿತ್ತು ಇದಾದ ಬಳಿಕ ನೋವಿಗೆ ಮಾತ್ರೆ ಬೇಕು ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದ್ದಾರೆ ಅದರಂತೆ ವೈದ್ಯರ ಕ್ಯಾಬಿನ್ ಇರುವಲ್ಲಿಗೆ ಕರೆದುಕೊಂಡು ಬಿಡಲಾಗಿತ್ತು ಇದಾದ ಬಳಿಕ ವೈದ್ಯರ ಕ್ಯಾಬಿನ್ ಒಳಗೆ ಪ್ರವೇಶಿಸಿದ ಇಬ್ಬರು ವೈದ್ಯರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ, ಗುಂಡಿನ ಸದ್ದು ಕೇಳಿ ವೈದ್ಯರ ಕ್ಯಾಬಿನ್ ಒಳಗೆ ನೋಡಿದಾಗ ವೈದ್ಯರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಿದ್ದಾರೆ.
ಶಂಕಿತರು 16 ಅಥವಾ 17 ವರ್ಷ ವಯಸ್ಸಿನವರಾಗಿರಬಹುದು ಎಂದು ಆಸ್ಪತ್ರೆ ಸಿಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆ ಸಿಬಂದಿಗಳ ಮಾಹಿತಿ ಪ್ರಕಾರ ಇಬ್ಬರು ಯುವಕರು ಒಂದು ದಿನದ ಮೊದಲು ಆಸ್ಪತ್ರೆಗೆ ಭೇಟಿ ನೀಡಿ ಹೋಗಿದ್ದರು ಎಂದು ಹೇಳಿದ್ದಾರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೊಂದು ಉದೇಶಿತ ದಾಳಿ ಆಗಿರಬಹುದು ಎಂದು ಹೇಳಿದ್ದು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ.
ಇದನ್ನೂ ಓದಿ: Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್ ಈಗ ಸ್ಫೋಟ!