Advertisement

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಅಜ್ಜ, ಮೊಮ್ಮಗಳ ಸಾವು

11:11 AM Aug 07, 2018 | udayavani editorial |

ಬಸ್ತಿ, ಉತ್ತರ ಪ್ರದೇಶ : ಜಿಲ್ಲೆಯ ಪರಶುರಾಮಪುರ ಪ್ರದೇಶ ವ್ಯಾಪ್ತಿಯ ಆಗ್ಯಾ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಯೊಂದರ ಗೋಡೆ ಕುಸಿದು ಬಿದ್ದು ಓರ್ವ ಹಿರಿಯ ವ್ಯಕ್ತಿ ಮತ್ತು ಆತನನ ಮೊಮ್ಮಗಳು ದಾರುಣವಾಗಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೃತರನ್ನು ದೇವತಾದೀನ್‌ (55) ಮತ್ತು ಮೊಮ್ಮಗಳು ಕೋಮಲ್‌ (9) ಎಂದು ಗುರುತಿಸಲಾಗಿದೆ.  ಇವರ ಜತೆಗೇ ಮಲಗಿದ್ದ ಅಂಕುಶ್‌ (6) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next