Advertisement

ಪುಲ್ವಾಮಾ: ಜೈಶ್ ಉಗ್ರಗಾಮಿ ಸಂಘಟನೆಯ ಇಬ್ಬರು ಸಹಚರರ ಬಂಧನ, ಪ್ರಕರಣ ದಾಖಲು

05:01 PM Jan 11, 2021 | Team Udayavani |

ಜಮ್ಮು-ಕಾಶ್ಮೀರ: ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಸಹಚರರನ್ನು ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಸೋಮವಾರ(ಜನವರಿ 11, 2021) ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Advertisement

ಇಬ್ಬರು ಶಂಕಿತರು ದೇಶಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಜೈಶ್ ಎ ಮೊಹಮ್ಮದ್ ಉಗ್ರರಿಗೆ ರವಾನಿಸುತ್ತಿದ್ದರು ಎಂದು ವರದಿ ತಿಳಿಸಿದೆ. ಇಬ್ಬರ ವಿರುದ್ಧವೂ ಆವಂತಿಪೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆವಂತಿಪೋರಾ ಪೊಲೀಸರು ಹಾಗೂ 42ನೇ ರಾಷ್ಟ್ರೀಯ ರೈಫಲ್ಸ್ ಮತ್ತು 130ನೇ ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಿದ್ದು, ಇವರು ಉಗ್ರರಿಗೆ ಬೆಂಬಲ, ಆಶ್ರಯ ನೀಡುವುದು ಸೇರಿದಂತೆ ಉಗ್ರರ ಶಸ್ತ್ರಾಸ್ತ್ರ, ಸ್ಫೋಟಕ ಸಾಗಣೆಯಲ್ಲಿ ಶಾಮೀಲಾಗಿದ್ದರು ಎಂದು ವರದಿ ತಿಳಿಸಿದೆ.

ಬಂಧಿತ ಸಹಚರರನ್ನು ಗಾಧಿಖಾಲ್ ಚೆರ್ಸೂ ಪ್ರದೇಶದ ಶೇಝಾನ್ ಗುಲ್ಜಾರ್ ಮತ್ತು ಆವಂತಿಪೋರಾ ನಿವಾಸಿ ವಾಸೀಂ ಉಲ್ ರೆಹಮಾನ್ ಶೇಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸ್ಫೋಟಕ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next