Advertisement

ಇದೇನು ಷಡ್ಯಂತ್ರ? ಪಾಕ್ ನಲ್ಲಿರುವ ಇಬ್ಬರು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ನಾಪತ್ತೆ!

02:06 PM Jun 15, 2020 | Nagendra Trasi |

ಇಸ್ಲಾಮಾಬಾದ್/ನವದೆಹಲಿ:ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿರುವ ಇಬ್ಬರು ಭಾರತೀಯ ಅಧಿಕಾರಿಗಳು ಜೂನ್ 15ರಿಂದ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಈ ಘಟನೆ ಬಗ್ಗೆ ಪಾಕ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ವರದಿ ವಿವರಿಸಿದೆ.

Advertisement

ಮೂಲಗಳ ಪ್ರಕಾರ, ಇಬ್ಬರು ಅಧಿಕಾರಿಗಳು ಸುಮಾರು ಎರಡು ಗಂಟೆಗೂ ಅಧಿಕ ಕಾಲ ನಾಪತ್ತೆಯಾಗಿದ್ದಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಭಾರತ ಅಧಿಕೃತವಾಗಿ ದೂರನ್ನು ದಾಖಲಿಸಿದೆ ಎಂದು ವರದಿ ಹೇಳಿದೆ.

ಇಂದು ಬೆಳಗ್ಗೆ 8.30ರಿಂದ ಇಬ್ಬರು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಇತ್ತೀಚೆಗಷ್ಟೇ ದಿಲ್ಲಿಯಲ್ಲಿದ್ದ ಇಬ್ಬರು ಪಾಕಿಸ್ತಾನಿ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಭಾರತ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ದೆಹಲಿಯ ಪಾಕ್ ರಾಯಭಾರ ಕಚೇರಿಯಲ್ಲಿದ್ದ ಇಬ್ಬರು ಪಾಕ್ ಅಧಿಕಾರಿಗಳು ಭಾರತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ವೀಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ ಪಾಕಿಸ್ತಾನ ಸೇಡಿಗಾಗಿ ಈ ಕ್ರಮ
ಕೈಗೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next