Advertisement

ಆಕಾಶ ಮಾರ್ಗದಲ್ಲೇ ಎರಡು ಹೆಲಿಕಾಪ್ಟರ್ ಡಿಕ್ಕಿ; ನಾಲ್ವರ ದುರ್ಮರಣ-ಮೂವರು ಚಿಂತಾಜನಕ

03:28 PM Jan 02, 2023 | Team Udayavani |

ಸಿಡ್ನಿ: ಆಕಾಶ ಮಾರ್ಗ ಮಧ್ಯೆದಲ್ಲೇ ಎರಡು ಹೆಲಿಕಾಪ್ಟರ್ ಗಳು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಇಹಲೋಕ ತ್ಯಜಿಸಿರುವ ಘಟನೆ ಸೋಮವಾರ (ಜನವರಿ 02) ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ನಡೆದಿದೆ. ಮತ್ತೊಂದು ಚಿತ್ರದಲ್ಲಿ ಒಂದು ಹೆಲಿಕಾಪ್ಟರ್ ರೋಟರ್ ಸಮುದ್ರ ತೀರದ ಸಮೀಪ ಬಿದ್ದಿರುವ ದೃಶ್ಯ ಸೆರೆಯಾಗಿದೆ.

Advertisement

ಇದನ್ನೂ ಓದಿ:ಜ.5 ರಿಂದ ಬೀದರ್ ನಲ್ಲಿ 4 ದಿನಗಳ ಕಾಲ ‘ಪಂಚರತ್ನ ರಥಯಾತ್ರೆ’ : ಬಂಡೆಪ್ಪ ಕಾಶೆಂಪುರ್

ಘಟನೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರ ತೀರದ ಸಮೀಪ ಒಂದು ಹೆಲಿಕಾಪ್ಟರ್ ಬಿದ್ದಿದ್ದು, ಸ್ವಲ್ಪ ದೂರದಲ್ಲಿ ಅದರ ರೋಟರ್ ಬಿದ್ದಿರುವುದಾಗಿ ಎಬಿಸಿ ವರದಿ ಮಾಡಿದೆ.

ಜನಪ್ರಿಯ ಸೀ ವರ್ಲ್ಡ್ ಮೆರೈನ್ ಥೀಮ್ ಪಾರ್ಕ್ ಬಳಿ ಮತ್ತೊಂದು ಹೆಲಿಕಾಪ್ಟರ್ ಬಿದ್ದಿರುವುದು ಪತ್ತೆಯಾಗಿದೆ. ಎರಡು ಹೆಲಿಕಾಪ್ಟರ್ ಗಳು ಆಕಾಶ ಮಾರ್ಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next