Advertisement

ಪಶ್ಚಿಮ ಬಂಗಾಲ: ಜಿಂಕೆ ಮಾಂಸ ವಶ; ಇಬ್ಬರ ಬಂಧನ

12:13 PM Mar 28, 2018 | udayavani editorial |

ಅಲಿಪುರ್‌ದೋರ್‌, ಪಶ್ಚಿಮ ಬಂಗಾಲ : ಅಲಿಪುರ್‌ದೋರ್‌ ಜಿಲ್ಲೆಯ ಮೇದಾಬ್ರಿ ಟೀ ಎಸ್ಟೇಟ್‌ ಪ್ರದೇಶದಲ್ಲಿ ಜಿಂಕೆ ಮಾಂಸವನ್ನು ಅಕ್ರಮವಾಗಿ ಒಯ್ಯುತ್ತಿದ್ದ ಇಬ್ಬರನ್ನು ಅರಣ್ಯಾದಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.

Advertisement

ಸ್ಥಳೀಯರು ನೀಡಿದ ಮಾಹಿತಿಯನ್ನು ಅಧರಿಸಿ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಜಿಂಕೆ ಮಾಂಸ ಹೊಂದಿದ್ದ ಇಬ್ಬರನ್ನು ಬಂಧಿಸಿದರು. ಜಿಂಕೆ ಮಾಂಸವನ್ನು ಮನೆಯೊಂದರಲ್ಲಿ ಅವಿತಿಟ್ಟಿರುವುದನ್ನು ಪತ್ತೆ ಹಚ್ಚಲು ಶ್ವಾನವನ್ನು ಬಳಸಲಾಯಿತು. ಜಿಂಕೆಯನ್ನು ಕಡಿದು ಮಾಂಸ ಪ್ರತ್ಯೇಕಿಸಲು ಬಳಸಲಾದ ಲಾಂಗನ್ನು ವಶಪಡಿಸಿಕೊಳ್ಳಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next