Advertisement

ಎರಡು ತಲೆ ಮಗು ಜನನ!

12:33 PM Apr 14, 2018 | Team Udayavani |

ಸೊಲ್ಲಾಪುರ: ನಗರದ ಛತ್ರಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಎರಡು ತಲೆಗಳಿರುವ ವಿಚಿತ್ರ ಮಗುವಿನ ಜನಿಸಿದ್ದು, ಅಪರೂಪಕ್ಕೊಮ್ಮೆ ಈ ರೀತಿ ಮಗುವಿಗೆ ಜನ್ಮವಾಗುತ್ತದೆ ಎಂದು ಡಾ|ಸುನೀಲ ಘಾಟೆ ತಿಳಿಸಿದ್ದಾರೆ. ಸೊಲ್ಲಾಪುರದ ವೈದ್ಯಲೋಕದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಂತಹ ಎರಡು ತಲೆಗಳಿರುವ ವಿಚಿತ್ರ ಮಗುವಿನ ಜನ್ಮವಾಗಿದೆ. ಮಗುವಿನ ತಲೆಗಳು ಎರಡಾಗಿದ್ದರೂ ದೇಹ ಮಾತ್ರ ಒಂದೇ ಆಗಿದೆ. ಮಗುವಿಗೆ ಎರಡು ಹೃದಯ, ಎರಡು ಕಡೆ ಉಸಿರಾಟ ಮತ್ತು ಅನ್ನನಾಳವಿದೆ. ಎರಡು ಕಾಲು, ಎರಡು ಕೈಗಳಿವೆ. ಮಗುವಿನ ದೇಹದಲ್ಲಿ ಅನೇಕ ಸಮಸ್ಯೆಗಳಿವೆ. ಆದ್ದರಿಂದ ಮಗು ಹೆಚ್ಚು ದಿನಗಳ ಕಾಲ ಬದುಕುಳಿಯುವ ಯಾವುದೇ ಸಾಧ್ಯತೆಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನಗರದ ಬಿಡಿ ಘರಕುಲದ ಮಹಿಳೆಗೆ ಇಂತಹ ವಿಚಿತ್ರ ಮಗು ಜನ್ಮವಾಗಿದ್ದು, ಸಿಜರಿನ್‌ ಮೂಲಕ ಹೆರಿಗೆ ಮಾಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next