Advertisement

15 ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದವನಿಗೆ ಆತನ ಹಲ್ಲುಗಳೇ ಮುಳುವಾಯಿತು

06:01 PM Feb 11, 2023 | Team Udayavani |

ಮುಂಬೈ: ಕಳೆದ ಹದಿನೈದು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಕಡೆಗೂ ಹದಿನೈದು ವರ್ಷಗಳ ಬಳಿಕ ಪತ್ತೆಹಚ್ಚುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

2007 ರಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಪ್ರವೀಣ್ ಅಶುಭಾ ಜಡೇಜಾ ಎಂಬ ವ್ಯಕ್ತಿ ತಾನು ಕೆಲಸ ಮಾಡಿಕೊಂಡಿದ್ದ ಅಂಗಡಿಯಲ್ಲೇ ನಲ್ವತ್ತು ಸಾವಿರ ಕದ್ದು ಬಂಧನದಲ್ಲಿದ್ದ ಅದಾದ ಬಳಿಕ ಜಾಮೀನು ಮೇಲೆ ಹೊರ ಬಂದಿದ್ದ ಆರೋಪಿ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಮುಂಬೈ ಪೊಲೀಸರು ಈತನ ಬಂಧನಕ್ಕೆ ಬಲೆ ಬಿಸಿದ್ದರು ಆದರೆ ಆರೋಪಿಯ ಪತ್ತೆ ಮಾತ್ರ ಆಗಲೇ ಇಲ್ಲ.

ಆದರೆ ಪೊಲೀಸರಿಗೆ ಈತನ ಗುರುತು ಪತ್ತೆಗೆ ಇದ್ದದ್ದು ಒಂದೇ ಕುರುಹು ಅದೇನೆಂದರೆ ಆತನ ಎರಡು ಹಲ್ಲು. ಆರೋಪಿ ಪ್ರವೀಣ್ ತನ್ನ ಎರಡು ಹಲ್ಲುಗಳನ್ನು ಚಿನ್ನದ ಲೇಪನ ಮಾಡಿಕೊಂಡಿದ್ದು ಇದನ್ನೇ ನೆನಪಿನಲ್ಲಿ ಇಟ್ಟುಕೊಂಡಿದ್ದ ಪೊಲೀಸರು ಬರೋಬ್ಬರಿ ಹದಿನೈದು ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದುರಾಡಳಿತದ ಹಳೆಯ ಆಟಗಾರರು ಕೈಜೋಡಿಸಿದ್ದಾರೆ: ತ್ರಿಪುರಾದಲ್ಲಿ ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next