ನವದೆಹಲಿ: ವಿಶ್ವವ್ಯಾಪಿಯಾಗುತ್ತಿರುವ ಕೊರೊನಾ ವೈರಸ್ ಇದೀಗ ಭಾರತ್ಕೂ ಕಾಲಿಡುವ ಆತಂಕ ಮೂಡಿದೆ. ದೆಹಲಿ ಮತ್ತು ತೆಲಂಗಾಣಗಳಲ್ಲಿ ಹೊಸದಾಗಿ ಎರಡು ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ಈ ವಿಷಯವನ್ನು ಸರಕಾರಿ ಮೂಲಗಳು ಖಚಿತಪಡಿಸಿವೆ.
ಕೋವಿಡ್-19ನ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಮತ್ತು ಇದನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಸರಕಾರ ತಿಳಿಸಿದೆ.
ದೆಹಲಿಯಲ್ಲಿ ಪತ್ತೆಯಾದ ಕೊರೊನಾ ವೈರಸ್ ಪೀಡಿತ ವ್ಯಕ್ತಿ ಇಟಲಿಗೆ ಭೇಟಿ ನೀಡಿ ಬಂದಿದ್ದರು ಮತ್ತು ಇನ್ನೊಬ್ಬರು ದುಬಾಯಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕೊರೊನಾ ವೈರಸ್ ನ ಮೂಲ ಚೀನಾದ ವುಹಾನ್ ನಿಂದ ಭಾರತಕ್ಕೆ ಹಿಂತಿರುಗಿದ್ದ ಕೇರಳದ ಮೂವರು ವಿದ್ಯಾರ್ಥಿಗಳಲ್ಲಿ ಈ ಹಿಂದೆ ವೈರಸ್ ಪಾಸಿಟಿವ್ ಪತ್ತೆಯಾಗಿತ್ತು. ಅವರೆಲ್ಲರೂ ಈಗ ಚೇತರಿಸಿಕೊಂಡಿದ್ದಾರೆ.