Advertisement

ಸಾಲ ಮನ್ನಾ ಬೆನ್ನಲ್ಲೇ ಚಾಮರಾಜನಗರ,ವಿಜಯಪುರದಲ್ಲಿ ರೈತರ ಆತ್ಮಹತ್ಯೆ!

11:29 AM Jul 06, 2018 | |

ಚಾಮರಾಜನಗರ/ವಿಜಯಪುರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 2 ಲಕ್ಷ ರೂಪಾಯಿ ವರೆಗಿನ ಸುಸ್ತಿ ಬೆಳೆ ಸಾಲ ಮನ್ನಾ ಮಾಡಿದ ಮರುದಿನವೇ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

Advertisement

ಚಾಮರಾಜನಗರದ ದೇಮದ ಹಳ್ಳಿ ಎಂಬಲ್ಲಿ ಚಿಕ್ಕಸ್ವಾಮಿ (40) ಎಂಬ ರೈತ ಗುರುವಾರ ತಡರಾತ್ರಿ ಮನೆಯಲ್ಲೇ ಉಟ್ಟ ಪಂಚೆಯಲ್ಲೇ ನೇಣಿಗೆ ಶರಣಾಗಿದ್ದಾರೆ. 

ನೇಣಿಗೆ ಶರಣಾದದನ್ನು ನೋಡಿದ ತಂದೆ ಪಕ್ಕದ ನಿವಾಸಿಗಳನನು ಕರೆದು ಚಾಮರಾಜನಗರ , ಮೈಸೂರಿನ ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಚಿಕ್ಕಸ್ವಾಮಿ ಕೊನೆಯುಸಿರೆಳೆದಿದ್ದರು. 

ಚಿಕ್ಕಸ್ವಾಮಿ ಖಾಸಗಿಯವರ ಬಳಿ 1 ಲಕ್ಷ ರೂಪಾಯಿ ಸಾಲ ಮಾಡಿದ್ದು ,ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 40 ಸಾವಿರ ರೂಪಾಯಿ ಸಾಲ ಮಾಡಿದ್ದರು. ವರ್ಷದ ಹಿಂದೆ ಚಿಕ್ಕಸ್ವಾಮಿ ಅವರ 1 ವರ್ಷದ ಮಗು ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ. 

Advertisement

ವಿಜಯಪುರ ರೈತ ಸಾವು 

ಮುದ್ದೇ ಬಿಹಾಳದ ಆಲೂರು ಗ್ರಾಮದ ಸಂಗಣ್ಣ ಕಪನೂರ  ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  2018 ರಲ್ಲಿ ಮಾಡಿದ ಸಾಲವೂ ಮನ್ನಾ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಾಲ ಮನ್ನಾ ಆಗದ ಕಾರಣಕ್ಕೆ ನೊಂದು ಸಾವಿಗೆ ಶರಣಾಗಿದ್ದಾರೆ.  ಸಂಗಣ್ಣ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next