Advertisement

ಶಿಕ್ಷಣ ಸಚಿವರಿಂದ ಎರಡು ಪರೀಕ್ಷೆ ಕೇಂದ್ರ ಪರಿಶೀಲನೆ

06:41 AM Jul 04, 2020 | Team Udayavani |

ನೆಲಮಂಗಲ: ತಾಲೂಕಿನ ಎರಡು ಪರೀಕ್ಷೆ ಕೇಂದ್ರಗಳಿಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್‌, ಅಧಿಕಾರಿಗಳ ತಂಡದ ಜತೆ ಭೇಟಿ ನೀಡಿ, ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ತಾಲೂಕಿನ ತ್ಯಾಮಗೊಂಡ್ಲು ಹಾಗೂ ನಗರದ  ಜೂನಿಯರ್‌ ಕಾಲೇಜಿನ ಪ್ರೌಢ ಶಾಲೆಗಳ ಪ್ರತಿ ಕೊಠಡಿಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಧೈರ್ಯ ಹಾಗೂ ವಿಶ್ವಾಸದಿಂದ ಪರೀಕ್ಷೆ ಬರೆಯು ವಂತೆ ತಿಳಿಸಿದ್ದಾರೆ.

Advertisement

ಸಚಿವರಿಗೆ ಶಾಸಕ ಡಾ .ಕೆ.ಶ್ರೀನಿವಾಸ ಮೂರ್ತಿ, ತಹಶೀಲ್ದಾರ್‌,  ಶ್ರೀನಿವಾಸ್‌, ಬಿಇಒ  ಮೇಶ್‌ಸಾಥ್‌ ನೀಡಿದರು. ತಪ್ಪಿಸಿಕೊಂಡ ಸಚಿವರು: ತಾಲೂಕಿನ 4 ಕೇಂದ್ರಗಳಿಗೆ ಭೇಟಿ ನೀಡಬೇಕಾದ ಸಚಿ ವರು, ಎರಡು ಕೇಂದ್ರ ಮಾತ್ರ ಪರಿ ಶೀಲಿಸಿ ದರು. ಬಸವಣ್ಣದೇವರ ಮಠದ ಕೇಂದ್ರ ಪರಿಶೀಲಿಸಿ, ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡುತ್ತೇನೆ ಎಂದ ಸಚಿವರು ಹೆದ್ದಾರಿ ಪ್ರವೇಶ ಮಾಡುತ್ತಿದ್ದಂತೆ ಶ್ರೀ ಮಠದಲ್ಲಿ ಮಾಡಲಾಗಿದ್ದ, ಊಟದ ವ್ಯವಸ್ಥೆ ತಿರಸ್ಕರಿಸಿ ನೀಡದೆ ತಪ್ಪಿಸಿ ಕೊಂಡರು.

ವಿಶೇಷ ಪ್ಯಾಕೇಜ್‌ಗೆ ಮನವಿ: ರಾಜ್ಯದ ಖಾಸಗಿ ಶಾಲೆಗಳು ಕೊರೊನಾ ಸಂಕಷ್ಟ  ದಿಂದ ಭಾರೀ ಆರ್ಥಿಕ ಸಮಸ್ಯೆ ಎದುರಾಗಿದ್ದು, ಶಿಕ್ಷಕರಿಗೆ ಸಂಬಳ ನೀಡಲು ಸಮಸ್ಯೆಯಾಗಿದೆ. ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ತಾಲೂಕಿನ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಟಿ.ಕೆ.ನರಸೇಗೌಡ ಹಾಗೂ ತಂಡ ಮನವಿ  ಸಲ್ಲಿಸಿದರು. ಅದಕ್ಕೆ ಉತ್ತರಿಸಿದ ಸಚಿವರು ಚರ್ಚೆ ಮಾಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next