Advertisement

ಎರಡು ಡಾಲ್ಫಿನ್‌ ಕಳೆಬರ ಪತ್ತೆ

11:29 AM May 26, 2022 | Team Udayavani |

ಕಾರವಾರ: ತಾಲೂಕಿನ ಕಡಲ ತೀರದಲ್ಲಿ ಒಂದೇ ದಿನ ಎರಡು ಡಾಲ್ಫಿನ್‌ ಕಳೆಬರಗಳು ಪತ್ತೆಯಾಗಿವೆ. ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಮೊದಲ ಬಾರಿಗೆ ಅಪರೂಪದ ಇಂಡೋ ಫೆಸಿಫಿಕ್‌ ಫಿನ್‌ಲೆಸ್‌ ಫೋರ್‌ಪೊಯ್ಸ ಪ್ರಭೇದದ ಡಾಲ್ಫಿನ್‌ ಪತ್ತೆಯಾಗಿದ್ದು, ಹೆಣ್ಣು ಡಾಲ್ಫಿನ್‌ ಮರಿಯಾಗಿದೆ. ಹೆಚ್ಚಾಗಿ ಏಷ್ಯಾ, ಇಂಡೋನೇಷ್ಯಾ, ಮಲೇಶಿಯಾ, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಕಾಣ ಸಿಗುವ ಡಾಲ್ಫಿನ್‌ ಪ್ರಭೇದ ಇದಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ.

Advertisement

ಸಮುದ್ರದಲ್ಲಿ ಬೋಟ್‌ ತಾಗಿದ ಪೆಟ್ಟಿನಿಂದ ಮೃತಪಟ್ಟಿದೆ ಎಂದು ಕಾರವಾರ ಕಡಲಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಶಿವಕುಮಾರ್‌ ಹರಗಿ ಅಭಿಪ್ರಾಯಪಟ್ಟಿದ್ದಾರೆ. ಇದರ ಸಂತತಿ ಇನ್ನೂ ಇರಬಹುದು ಎಂದರು. ಫೋರ್‌ಪೊಯ್ಸ ಡಾಲ್ಫಿನ್‌ ಆಂತರಿಕ ರಕ್ತಸ್ರಾವವಾಗಿ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಅಂದಾಜಿಸಿದ್ದೇವೆ ಎಂದರು.

ಅಲಿಗದ್ದಾ ತೀರದಲ್ಲಿ ಮತ್ತೂಂದು ಕಳೆಬರಹ: ಕಾರವಾರ ನಗರದ ಬಂದರಿಗೆ ಹೊತ್ತಿಕೊಂಡಿರುವ ಅಲಿಗದ್ದಾ ಕಡಲತೀರದಲ್ಲಿ ಡಾಲ್ಫಿನ್‌ ಇನ್ನೊಂದು ಕಳೆಬರ ಪತ್ತೆಯಾಗಿದೆ. ಈ ಡಾಲ್ಫಿನ್‌ ಸಹ ಹೆಣ್ಣು ಡಾಲ್ಫಿ ನ್‌ದ್ದಾಗಿದ್ದು, ಫೆಸಿಫಿಕ್‌ ಹಂಪ್‌ ಬ್ಯಾಕ್‌ ಪ್ರಭೇದಕ್ಕೆ ಸೇರಿದೆ. ಇವುಗಳ ಸಂತತಿ ಕಾರವಾರದಿಂದ ಗೋವಾತನಕ ಅರಬ್ಬಿ ಸಮುದ್ರದಲ್ಲಿ ಹೆಚ್ಚಿದೆ. ಕೂರ್ಮಗಡ ನಡುಗಡ್ಡೆ ಸಮೀಪ ಹಾಗೂ ಸುತ್ತಮುತ್ತ ಹಂಪ್‌ ಬ್ಯಾಕ್‌ ಡಾಲ್ಫಿ ನ್‌ಗಳು ಸಾಕಷ್ಟಿವೆ. ಮೀನುಗಾರರು ಈ ಡಾಲ್ಫಿನ್‌ಗಳನ್ನು ತಮ್ಮ ಸ್ನೇಹಿತರಂತೆ ನೋಡುತ್ತಿದ್ದು, ಇವುಗಳನ್ನು ಬೇಟೆಯಾಡಲ್ಲ. ಅಲಿಗದ್ದಾ ಕಡಲತೀರದಲ್ಲಿ ಸಿಕ್ಕ ಡಾಲ್ಫಿ ನ್‌ ಸುಮಾರು 2.5 ಮೀಟರ್‌ಗಳಷ್ಟು ಉದ್ದವಿದೆ. ಈ ಡಾಲ್ಫಿನ್‌ ಮೃತಪಟ್ಟು ಸಾಕಷ್ಟು ದಿನಗಳಾಗಿದೆ. ಕಳೆಬರ ಕೊಳೆತ ಸ್ಥಿತಿಯಲ್ಲಿದ್ದಿದ್ದರಿಂದ ಇದರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಕೋಸ್ಟಲ್‌ ಮರೈನ್‌ ವಿಭಾಗದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್‌ ಮಾಹಿತಿ ನೀಡಿದರು.

ಸಮುದ್ರ ಜೀವಿಗಳ ಕಣ್ಮರೆ ಆತಂಕ ತಂದಿದೆ. ಒಂದೇ ದಿನ ಎರಡು ಡಾಲ್ಫಿನ್‌ ಶವಗಳು ಪತ್ತೆಯಾದುದು ಆತಂಕಕಾರಿ. ಸಮುದ್ರ ಜೀವಿಗಳ ಬಗ್ಗೆ ಸಮುದ್ರ ಬೇಟೆ ವೇಳೆ ಸಾಕಷ್ಟು ಜಾಗೃತಿ ವಹಿಸುವ ಅಗತ್ಯವಿದೆ ಎಂದರು. ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next