Advertisement

ಸಾರ್ವಜನಿಕರಲ್ಲಿ ವಿಶ್ವಾಸ ಬೆಳೆಸುವ ಯತ್ನ: 400 ಕಿ.ಮೀ. ಸೈಕಲ್‌ ತುಳಿದ ವೈದ್ಯ ಜೋಡಿ!

09:42 AM Jul 28, 2021 | Team Udayavani |

ಪುತ್ತೂರು: ವೈದ್ಯರು ಮತ್ತು ಸಾರ್ವಜನಿಕರ ನಡುವೆ ನಂಬಿಕೆ, ವಿಶ್ವಾಸವನ್ನು ಬೆಳೆಸಲು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯರಿಬ್ಬರು ಬೆಂಗಳೂರಿನಿಂದ ಮಂಗಳೂರಿನ ತನಕ ಸೈಕಲ್‌ ಯಾತ್ರೆ ನಡೆಸುತ್ತಿದ್ದು ಮಂಗಳವಾರ ಪುತ್ತೂರಿಗೆ ಆಗಮಿಸಿತು.

Advertisement

ಐಸಿಯು ತಜ್ಞರಾದ ಡಾ| ಜಸ್ಟೀನ್‌ ಗೋಪಾಲ್‌ದಾಸ್‌ ಮತ್ತು ಡಾ| ನಿಖಿಲ್‌ ನಾರಾಯಣ ಸ್ವಾಮಿ ಅವರು ಸೈಕಲ್‌ನಲ್ಲಿ ಹೊರಟವರು. ಬೆಂಗಳೂರಿನ ಐಎಂಎ ಹಾಲ್‌ ಬಳಿಯಿಂದ ರವಿವಾರ ಬೆಳಗ್ಗೆ ಯಾತ್ರೆ ಆರಂಭಿಸಿದ್ದು ಸುಮಾರು 400 ಕಿ.ಮೀ. ಸಂಚರಿಸಿ ಅಲ್ಲಲ್ಲಿ ಜನರ ಜತೆಗೆ ಸಂವಹನ ನಡೆಸುವ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ಬದಲಾವಣೆಗಾಗಿ ಯಾತ್ರೆ: ಬದಲಾವಣೆಯ ಉದ್ದೇಶಕ್ಕಾಗಿ ಈ  ಯಾತ್ರೆ ಹಮ್ಮಿಕೊಂಡಿದ್ದೇವೆ. ವೈದ್ಯರ ಮತ್ತು ಜನರ ನಡುವೆ ಉತ್ತಮ ಸಂವಹನಗಳ ಅಗತ್ಯವಿದೆ. ಜನರು ವೈದ್ಯರಲ್ಲಿ ನಂಬಿಕೆ ಇಡಬೇಕು ಮತ್ತು

ವೈದ್ಯರು ಜನರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು. ವೈದ್ಯರ ಮೇಲೆ  ಹಲ್ಲೆ ಸರಿಯಲ್ಲ. ಹಲವು ಸಂದರ್ಭ ಗಳಲ್ಲಿ ಸಂವಹನದ ಕೊರತೆ ಯಿಂದಾಗಿ ಗೊಂದಲಗಳು ಸಂಭವಿಸುತ್ತವೆ. ರೋಗಿಗಳ ಕುಟುಂಬ  ಸ್ಥರು ಗೊಂದಲ ಸೃಷ್ಟಿಸುವು ದ ಕ್ಕಿಂತಲೂ ಮೂರನೇ ವ್ಯಕ್ತಿಗಳು, ಸಮಾಜಘಾತಕ ಶಕ್ತಿಗಳು ಗೊಂದಲ ಸೃಷ್ಟಿಸಿ ಹಲ್ಲೆ ನಡೆಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಡಾ| ಜಸ್ಟೀನ್‌ ಗೋಪಾಲ್‌ದಾಸ್‌ ಮತ್ತು ಡಾ| ನಿಖೀಲ್‌ ನಾರಾಯಣ ಸ್ವಾಮಿ ಹೇಳುತ್ತಾರೆ.

ಹಲ್ಲೆ ಸರಿಯಲ್ಲ:

Advertisement

ಬಹುತೇಕ ಹಲ್ಲೆ ಪ್ರಕರಣಗಳು ಹಣದ ವಿಚಾರದಿಂದ ಆಗುತ್ತಿಲ್ಲ. ಬದಲಿಗೆ ಜನರಲ್ಲಿನ ನಿರೀಕ್ಷೆಗಳ ಕಾರಣಗಳಿಂದ ನಡೆಯುತ್ತಿವೆ. ಹಿಂದಿನ ಚಿಕಿತ್ಸಾ ವಿಧಾನಕ್ಕೂ ಇಂದಿನ ಚಿಕಿತ್ಸಾ ವಿಧಾನಕ್ಕೂ ಬಹಳಷ್ಟು ವ್ಯತ್ಯಾಸ ಗಳಿವೆ. ಸಾರ್ವಜನಿಕರು ಇದನ್ನು ಅರ್ಥೈಸಿಕೊಳ್ಳಬೇಕು. ವೈದ್ಯರಿಂದ ತಪ್ಪುಗಳು ಸಂಭವಿಸಿದಲ್ಲಿ ಕಾನೂನು ರೀತಿ ಯಲ್ಲಿ ಪರಿಹರಿಸಿಕೊಳ್ಳಬೇಕು. ಈ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಯಾತ್ರೆಯ ಉದ್ದೇಶ ಎಂದರು.

ಪುತ್ತೂರಿಗೆ ಆಗಮಿಸಿದ ಸಂದರ್ಭ ಪುತ್ತೂರು ಐಎಂಎ ಕರ್ನಾಟಕದ ಹೆರಾಸ್‌ಮೆಂಟ್‌ ಸೆಲ್‌ನ ಅಧ್ಯಕ್ಷ ಡಾ| ಗಣೇಶ್‌ ಪ್ರಸಾದ್‌ ಮುದ್ರಜೆ, ಆಸ್ಪತ್ರೆ ಅಸೋಸಿಯೇಶನ್‌ ಅಧ್ಯಕ್ಷ ಡಾ| ಶ್ರೀಪತಿ ರಾವ್‌, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ವೈದ್ಯರಾದ ಡಾ| ಭಾಸ್ಕರ್‌, ಡಾ| ರವೀಂದ್ರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next