Advertisement

Russiaಕ್ರಿಮಿಯಾ ಸೇತುವೆಯಲ್ಲಿ ಸ್ಫೋಟ: ದಂಪತಿ ಸಾವು

10:29 PM Jul 17, 2023 | Team Udayavani |

ಮಾಸ್ಕೊ: ರಷ್ಯಾದಲ್ಲಿ ಸೋಮವಾರ ಕ್ರಿಮಿಯಾ ಸೇತುವೆಯ ಎರಡು ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ದಂಪತಿ ಮೃತಪಟ್ಟಿದ್ದು, ಮಗು ಗಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ರಷ್ಯಾದಿಂದ ಕ್ರಿಮಿಯಾ ಸಂಪರ್ಕಿಸುವ ಬೃಹತ್‌ ಸೇತುವೆಯಲ್ಲಿ ಸೋಮವಾರ ಸ್ಥಳೀಯ ಸಮಯ ಮುಂಜಾನೆ 3.04 ಗಂಟೆಗೆ ಹಾಗೂ 3.20 ಗಂಟೆಗೆ ಎರಡು ಸ್ಫೋಟಗಳು ಸಂಭವಿಸಿದೆ ಎಂದು ರಷ್ಯಾದ ಗ್ರೇ ಝೋನ್‌ ಚಾನಲ್‌ ವರದಿ ಮಾಡಿದೆ. ಉಕ್ರೇನ್‌ ಈ ಸ್ಫೋಟಗಳ ಹಿಂದಿದೆ ಎನ್ನಲಾಗಿದೆ.

“ಸ್ಫೋಟದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಲ್ಗೊರೊಡ್‌ ನಿವಾಸಿಯಾದ ಪತಿ, ಪತ್ನಿ ಮೃತಪಟ್ಟಿದ್ದಾರೆ. ಅವರು ಚಿಕ್ಕ ವಯಸ್ಸಿನ ಪುತ್ರಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,’ ಎಂದು ಬೆಲ್ಗೊರೊಡ್‌ ಗವರ್ನರ್‌ ವ್ಯಾಚೆಸ್ಲಾವ್‌ ಗ್ಲಾಡ್ಕೊàವ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next