Advertisement

ಉತ್ತರ ಕರ್ನಾಟಕದ ಸಮಸ್ಯೆಯ ಕುರಿತಾಗಿ ಸದನದಲ್ಲಿ ಎರಡು ದಿನ ಅವಕಾಶ: ಸಭಾಪತಿ ಹೊರಟ್ಟಿ

02:44 PM Dec 24, 2022 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಮಸ್ಯೆಗಳು, ಅಭಿವೃದ್ಧಿ ಕುರಿತಾಗಿ ಸದನದಲ್ಲಿ ಚರ್ಚಿಸಲು ಎರಡು ದಿನ ಅವಕಾಶ ನೀಡಲಾಗುವುದು ಎಂದು ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಇಲ್ಲಿನ ಸಿಎಂ ನಿವಾಸದಲ್ಲಿ ಸಿಎಂ ಜತೆ ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸದನ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಯಾವ ದಿನ ಚರ್ಚೆಗೆ ಅವಕಾಶ ಎಂದು ನಿರ್ಧರಿಸಲಾಗುವುದು. ಬಹುತೇಕ ಮಂಗಳವಾರ ಇಲ್ಲವೆ ಬುಧವಾರ ದಿಂದ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.

ಚರ್ಚೆಯಲ್ಲಿ ಹೆಚ್ಚಿನ ಸದಸ್ಯರಿಗೆ ಮಾತನಾಡಲು ಅವಕಾಶ ದೊರೆಯುವ ನಿಟ್ಟಿನಲ್ಲಿ ಕಾಲಮಿತಿ ನಿಗದಿಪಡಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಮರುಸ್ಥಾಪನೆ: ಸ್ವೀಕಾರಾರ್ಹವಲ್ಲ ಎಂದು ಯೋಗಿ ಕಿಡಿ

ಪರಿಷತ್ತು ಕಲಾಪ, ಚರ್ಚೆ ವೇಳೆ ಸಂಬಂಧಿಸಿದ ಸಚಿವರ ಕಡ್ಡಾಯ ಹಾಜರಿಗೆ ಸೂಚಿಸಲಾಗಿದೆ ಎಂದರು.

Advertisement

ಬೆಳಗಾವಿ ಅಧಿವೇಶನ ಕನಿಷ್ಠ 15 ದಿನ ನಡೆಯಬೇಕು, ಈ ಭಾಗದ ವಿಷಯಗಳ ಚರ್ಚೆಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂಬುದು ನನ್ನ ಆಶಯ. ಸದನ ಎಷ್ಟು ದಿನ ಎಂಬ ನಿಗದಿ ಸರಕಾರಕ್ಜೆ ಬಿಟ್ಟದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next