ತುಮಕೂರು: ನಗರದಲ್ಲಿ ಮತ್ತೆರಡು ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಸೋಂಕಿತ ಸಂಖ್ಯೆ ಪಿ 535 ಮೃತ ವೃದ್ದನ ಮನೆಯ ಪಕ್ಕದ ಮನೆಯವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಪಿ.535 ಸೋಂಕಿತ ವೃದ್ದನಿಂದ ಈಗಾಗಲೇ ಪತ್ನಿಗೆ ಸೋಂಕು ಹರಡಿತ್ತು. ಈಗ ಮತ್ತಿಬ್ಬರಿಗೆ ಹರಡಿದ್ದು ತುಮಕೂರು ನಗರ ದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7 ಆಗಿದ್ದು ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನಗರದ 40 ಪುರುಷನಿಗೆ ಮತ್ತು 29 ವರ್ಷದ ಮಹಿಳೆಗೆ ಸೋಂಕು ತಾಗಿರುವುದು ದೃಢವಾಗಿದೆ. ಇವರಿಗೆ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ಸೋಂಕು ಹೆಚ್ಚು ಹರಡುತ್ತಿದೆ ಆದರೆ ಪಿ535 ಗೆ ಸೊಂಕು ಹೇಗೆ ತಲುಪಿತು ಎನ್ನುವುದು ಇದುವರೆಗೂ ತಿಳಿಯುತ್ತಿಲ್ಲ.
ಇದುವರೆಗೆ ಇಬ್ಬರು ಮೃತಪಟ್ಟಿದ್ದು ಒಬ್ಬರು ಗುಣಮುಖ ರಾಗಿದ್ದಾರೆ. ಐವರು ಸೋಂಕಿತರಿಗೆ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.