Advertisement

ಮೇಲ್ಮನೆಯಲ್ಲಿ ಎರಡು ವಿಧೇಯಕ ಅಂಗೀಕಾರ

08:55 AM Nov 24, 2017 | Team Udayavani |

ವಿಧಾನ ಪರಿಷತ್ತು: ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ಗುರುವಾರ ಮೇಲ್ಮನೆಯಲ್ಲೂ ಅಂಗೀಕಾರ ಸಿಕ್ಕಿದೆ. ಇನ್ನು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತವಷ್ಟೇ ಬಾಕಿ ಉಳಿದಿದ್ದು, ಆ ಕಾರ್ಯ ಪೂರ್ಣಗೊಂಡರೆ ಕಾಯ್ದೆಯಾಗಿ ಜಾರಿಗೆ ಬರಲಿದೆ.

Advertisement

ವಿಧೇಯಕದ ಕುರಿತು ಗುರುವಾರ ಸುದೀರ್ಘ‌ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ನೀಡಿದ ಸಲಹೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆರೋಗ್ಯ ಸಚಿವ ರಮೇಶ್‌ಕುಮಾರ್‌, ನಿಯಮಗಳನ್ನು ರೂಪಿಸು ವಾಗ ಸದಸ್ಯರ ಅಭಿಪ್ರಾಯ ಪರಿಗಣಿಸುವುದಾಗಿ ಭರವಸೆ ನೀಡಿದರು.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು, ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜನತೆಯ ಶೋಷಣೆ ನಿಯಂತ್ರ ಣಕ್ಕೆ ತಿದ್ದುಪಡಿ ವಿಧೇಯಕ ತಂದಿರುವ ಕ್ರಮ ಸ್ವಾಗತಿ ಸುವುದರ ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ  ಗುಣಮಟ್ಟ ಕಾಯ್ದು ಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಡ್ತಿ ಮೀಸಲು ವಿಧೇಯಕಕ್ಕೆ ಅಸ್ತು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ನೀಡಿರುವ ಮೀಸಲಾತಿ ಬಡ್ತಿ ಉಳಿಸಿಕೊಳ್ಳುವ ಸಂಬಂಧ ವಿಧಾನಸಭೆಯಲ್ಲಿ ಅಂಗೀಕೃತವಾಗಿರುವ ಕರ್ನಾಟಕ ಸಿವಿಲ್‌ಸೇವೆಗಳ ಮೀಸಲಾತಿ ಆಧಾರದ ಬಡ್ತಿ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಗುರುವಾರ ಒಪ್ಪಿಗೆ ಸಿಕ್ಕಿದೆ.  

ರಾಜ್ಯದಲ್ಲಿ ಮಣಿಪಾಲ್‌ ಆಸ್ಪತ್ರೆಗಳು ಉತ್ತಮವಾಗಿ ಆರೋಗ್ಯ ಸೇವೆ ನೀಡುತ್ತಿವೆ. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳ
ಅನೈತಿಕ ಪ್ರಯತ್ನದಿಂದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಕೆಟ್ಟ ಹೆಸರು ಬಂದಿದೆ. ಖಾಸಗಿ ವೈದ್ಯರ ಮುಷ್ಕರದ ವೇಳೆ ತಾವು ಆರೋಗ್ಯ ಸೇವೆ ಒದಗಿಸುವುದಾಗಿ ಸರ್ಕಾರಿ ವೈದ್ಯರು ಭರವಸೆ ನೀಡಬೇಕಿತ್ತು. 

ಮೋಟಮ್ಮ, ಕಾಂಗ್ರೆಸ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next