Advertisement

 ಎರಡು ಸಾರ್ಥಕ ಸಂಗೀತ ಶಿಬಿರಗಳು

06:00 AM Jun 01, 2018 | |

ಶಿಬಿರದ ಕೊನೆಯಲ್ಲಿ ಸುಶಾಂತ್‌ ಕೆ. ಸೋಮಸುಂದರನ್‌ ಅವರಿಂದ ಹಿಂದೂಸ್ಥಾನಿ ಕಛೇರಿ ಏರ್ಪಟ್ಟಿತು

Advertisement

ಕಾಸರಗೋಡಿನ ಬಳ್ಳಪದವಿನಲ್ಲಿರುವ ‘ನಾರಾಯಣೀಯಮ…’ ಪ್ರತಿಷ್ಠಾನದ ವೀಣಾವಾದಿನಿ ಸಂಗೀತ ಶಾಲೆಯು ಈ ಬೇಸಿಗೆಯಲ್ಲಿ ಎರಡು ವೈಶಿಷ್ಟ್ಯಪೂರ್ಣವಾದ ಶಿಬಿರಗಳನ್ನು ಆಯೋಜಿಸ್ಟಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಗಾಗಿ ‘ಗಾನಮಾಧುರ್ಯಮ…’ ಎಂಬ ಹೆಸರಿನಲ್ಲಿ ಆಯೋಜನೆಗೊಂಡರೆ, ಎರಡನೇ ಶಿಬಿರವು ಶಾಸ್ತ್ರೀಯ ಸಂಗೀತದ ಹನ್ನೆರಡು ಸ್ವರ ಪ್ರಭೇದಗಳನ್ನು ಶುದ್ಧವಾಗಿ ಆಯಾ ಸ್ವರಸ್ಥಾನಗಳಲ್ಲೇ ನಿಧಿಧ್ಯಾಸನ ಮಾಡುವ ಉದ್ದೇಶದಿಂದ “ಸ್ವರಸಾಧನಾ’ ಎಂಬ ಹೆಸರಿನಲ್ಲಿ ಆಯೋಜನೆಗೊಂಡಿತು. ಮೊದಲ ಶಿಬಿರವು ವಿದ್ವಾನ್‌ ಗೋವಿಂದನ್‌ ನಂಬೂದಿರಿ ತಾಮರಕ್ಕಾಡ್‌ ಅವರ ನಿರ್ದೇಶನದಲ್ಲಿ ಜರುಗಿತು. ಸಂಗೀತದಲ್ಲಿ ರಾಗಗಳ ಜೊತೆಗೆ ಸಾಹಿತ್ಯವನ್ನೂ ಶುದ್ಧವಾಗಿ ಉಚ್ಚರಿಸುವ ಮೂಲಕ ಸಾಹಿತ್ಯಕ್ಕೂ ಸಮಾನ ಸ್ಥಾನ ನೀಡುವುದರ ಅಗತ್ಯವನ್ನು ಗೋವಿಂದನ್‌ ನಂಬೂದಿರಿ ಮನಗಾಣಿಸಿಕೊಟ್ಟರು. ಹಂಸಧ್ವನಿ ರಾಗದಲ್ಲಿರುವ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌ ಅವರ ಆದಿತಾಳದ ವರ್ಣ; ಜಿಂಗಳ ರಾಗದಲ್ಲಿರುವ ತ್ಯಾಗರಾಜರ “ಅನಾಥುಡನುಗಾನು’ ಎಂಬ ರಚನೆ; ರೇವಗುಪ್ತಿ ರಾಗದಲ್ಲಿರುವ ಸ್ವಾತಿ ತಿರುನಾಳ್‌ ಅವರ “ರಾಮ ರಾಮ ಪಾಹಿರಾಮ’ ಎಂಬ ಕೃತಿ; ಸಿಂಧುಭೈರವಿ ರಾಗದಲ್ಲಿರುವ ಸದಾಶಿವ ಬ್ರಹೆ¾àಂದ್ರ ಅವರ “ಕೇಳದಿ ಬ್ರಹ್ಮಾಂಡೇ ಭಗವನ್‌’ ಎಂಬ ರಚನೆ ಮತ್ತು ರೀತಿಗೌಳ ರಾಗದಲ್ಲಿರುವ ತ್ಯಾಗರಾಜರ “ಬಾಲೇ ಬಾಲೇಂದು ಭೂಷಣೀ’ ಎಂಬ ರಚನೆಗಳನ್ನು ಶಿಬಿರದಲ್ಲಿ ಆಳವಾಗಿ ಅಭ್ಯಾಸ ಮಾಡಲಾಯಿತು. 


ಸಂಗೀತ ನಿರ್ದೇಶಕರಾದ ಜಯಪ್ರಕಾಶ್‌ ಚೆಂಗನಶೆರಿ ಮಾರ್ಗದರ್ಶನದಲ್ಲಿ ನಡೆದ “ಸ್ವರಸಾಧನಾ’ದಲ್ಲಿ ಸಂಗೀತದ ಹನ್ನೆರಡು ಸ್ವರ ಪ್ರಭೇದಗಳನ್ನು ಮನನ ಮಾಡುವುದರ ಕಡೆಗೆ ಹೆಚ್ಚಿನ ಗಮನ ನೀಡಲಾಯಿತು. ಹಾರ್ಮೋನಿಯಮ್‌ ಸ್ವರದ ನೆರವಿನೊಂದಿಗೆ ಗಮಕವಿಲ್ಲದೆ ನೇರವಾಗಿ ಸ್ವರಗಳನ್ನು ಹಾಗೂ ಸ್ವರಗುಂಪುಗಳನ್ನು ಅಭ್ಯಾಸ ಮಾಡುವ ಕ್ರಮವನ್ನು ಕಲಿಸಲಾಯಿತು. ಹಿಂದೂಸ್ಥಾನೀ ಸಂಗೀತಕ್ಕೆ ಉಪಯೋಗಿಸಲ್ಪಡುವ ಹಾರ್ಮೋನಿಯಮ್‌ ಉಪಕರಣವನ್ನು ಕರ್ಣಾಟಕ ಶಾಸ್ತ್ರೀಯ ಸಂಗೀತದ ಅಗತ್ಯಕ್ಕೆ ತಕ್ಕುದಾಗಿ ಹೇಗೆ ಒಗ್ಗಿಸಿಕೊಳ್ಳಬಹುದೆಂಬ ತಿಳಿವಳಿಕೆಯನ್ನು ಜಯಪ್ರಕಾಶ್‌ ಅವರು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. 

ಕೆ. ಶೈಲಾಕುಮಾರಿ 

Advertisement

Udayavani is now on Telegram. Click here to join our channel and stay updated with the latest news.

Next