Advertisement

ಗುಂಡಿನ ದಾಳಿಗೆ ಇಬ್ಬರು ಕ್ರೀಡಾಪಟುಗಳು ಬಲಿ

10:06 AM Feb 22, 2020 | sudhir |

ಪಟಿಯಾಲ: ಹಾಕಿ ಆಟಗಾರ ಹಾಗೂ ಆತನ ಸ್ನೇಹಿತನನ್ನು ಅಪರಿಚಿತನೋರ್ವ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪಂಜಾಬ್‌ನ ಹಾಕಿಪಟು ಅಮ್ರಿಕ್‌ ಸಿಂಗ್‌ ಹಾಗೂ ಆತನ ಸ್ನೇಹಿತ, ವಾಲಿಬಾಲ್‌ ಆಟಗಾರ ಸಿಮ್ರನ್‌ಜಿತ್‌ ಸಿಂಗ್‌ ಬಲಿಯಾದ ದುರ್ದೈವಿಗಳಾಗಿದ್ದಾರೆ.

Advertisement

ಬುಧವಾರ ರಾತ್ರಿ ಪ್ರತಾಪ್‌ನಗರದ ಡಾಬಾವೊಂದಕ್ಕೆ ತೆರಳಿದ ವೇಳೆ ಈ ಘಟನೆ ಸಂಭವಿಸಿದೆ. ಮತ್ತೂಂದು ತಂಡದೊಂದಿಗೆ ಸಣ್ಣ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಲುಪಿದೆ. ಈ ವೇಳೆ ಆ ಗುಂಪಿನಲ್ಲಿದ್ದ ಓರ್ವ ಬಂದೂಕಿನಿಂದ ಇಬ್ಬರತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next