Advertisement

ಫಿಫಾ ಮಹಿಳಾ ವಿಶ್ವಕಪ್‌ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಇಬ್ಬರ ಹತ್ಯೆ

11:30 PM Jul 20, 2023 | Team Udayavani |

ಆಕ್ಲಂಡ್‌: ಇಲ್ಲಿನ ಡೌನ್‌ಟೌನ್‌ ಬಳಿಯ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಬಂದೂಕುಧಾರಿಯೊಬ್ಬ ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಮಹಿಳಾ ವಿಶ್ವಕಪ್‌ನ ಮೊದಲ ಪಂದ್ಯ ಆರಂಭಕ್ಕೆ ಕೆಲವು ತಾಸುಗಳಿರುವಾಗ ಸಂಭವಿಸಿದೆ.ಆಬಳಿಕ ನಡೆದ ಪೊಲೀಸ್‌ ಶೂಟೌಟ್‌ನಲ್ಲಿ ಬಂದೂಕುಧಾರಿ ಮೃತಪಟ್ಟಿದ್ದಾನೆ. ಶೂಟೌಟ್‌ ವೇಳೆ ಅಧಿಕಾರಿ ಸಹಿತ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.

Advertisement

ನಾರ್ವೆ ಮತ್ತು ಇತರ ಫ‌ುಟ್‌ಬಾಲ್‌ ತಂಡಗಳು ಉಳಿದು ಕೊಂಡಿರುವ ಹೊಟೇಲ್‌ ಬಳಿ ಶೂಟಿಂಗ್‌ ಸಂಭವಿಸಿದೆ.ಈ ಘಟನೆಯ ಬಳಿಕ ಪ್ರತಿಕ್ರಿಯೆ ನೀಡಿರುವ ನ್ಯೂಜಿ ಲ್ಯಾಂಡ್‌ ಪ್ರಧಾನಿ ಕ್ರಿಸ್‌ ಹಿಪ್ಕಿನ್ಸ್ ಅವರು ಫುಟ್‌ಬಾಲ್‌ ಪಂದ್ಯಾ ವಳಿಯನ್ನು ನಿಗದಿಪಡಿಸಿದಂತೆ ಮುಂದುವರಿಯುತ್ತದೆ ಎಂದು ಹೇಳಿದರು.

ಸರಕಾರವು ಗುರುವಾರ ಬೆಳಗ್ಗೆ ಫಿಫಾ ಸಂಘಟಕರೊಂದಿಗೆ ಮಾತನಾಡಿದೆ. ಪಂದ್ಯಾವಳಿ ಈ ಹಿಂದೆ ಯೋಜಿಸಿದಂತೆ ಮುಂದುವರಿಯುತ್ತದೆ. ವ್ಯಾಪಕವಾದ ರಾಷ್ಟ್ರೀಯ ಭದ್ರತಾ ಬೆದರಿಕೆ ಸದ್ಯಕ್ಕ ಇಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next